ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಮಗನ ಮನೆಗೆ ಎನ್‍ಐಎ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಇದೀಗ ಇದಿನಬ್ಬ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ, ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ಸೇರಿದಂತೆ ಒಟ್ಟು ಎಂಟು ಮಂದಿಯ ವಿರುದ್ಧ ಎನ್‍ಐಎ ಚಾರ್ಜ್‍ಶೀಟ್ ಸಲ್ಲಿಸಿದೆ.
Advertisement
ಈ ದೋಷಾರೋಪಣ ಪಟ್ಟಿಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಹಲವು ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಿದೆ. ಲವ್ ಜಿಹಾದ್‍ಗೆ ಒಳಗಾಗಿ ಉಗ್ರ ಮಹಿಳೆಯಾಗಿ ಬದಲಾಗಿದ್ದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಸೇರಿದಂತೆ ಎಂಟು ಜನರ ವಿರುದ್ಧ ಎನ್‍ಐಎ ಚಾರ್ಜ್‍ಶೀಟ್ ಸಲ್ಲಿಸಿದೆ. ಆರೋಪಿಗಳಾದ ದೀಪ್ತಿ ಮಾರ್ಲ, ಅಮ್ಮರ್ ಅಬ್ದುಲ್ ರಹಿಮಾನ್, ಮೊಹಮ್ಮದ್ ವಕಾರ್ ಲಾನ್ ಯಾನೆ ವಿಲ್ಸನ್ ಕಾಶ್ಮೀರಿ, ಮಿಜಾ ಸಿದ್ದೀಕ್, ಶಿಫಾ ಹಾರೀಸ್ ಯಾನೆ ಆಯಿಷಾ, ಒಬೈದ್ ಹಮೀದ್ ಮಟ್ಟಾ, ಮಾದೇಶ್ ಶಂಕರ್ ಯಾನೆ ಅಬ್ದುಲ್ಲಾ, ಮುಜಾಮಿಲ್ ಹಸನ್ ಭಟ್ ವಿರುದ್ಧ ಈ ದೋಷಾರೋಪಣ ಪಟ್ಟಿಯನ್ನು ಎನ್‍ಐಎ ನೀಡಿದೆ. ಇದನ್ನೂ ಓದಿ: ಉಗ್ರರ ಜೊತೆ ನಂಟು ಶಂಕೆ – ಮಾಜಿ ಶಾಸಕ ಇದಿನಬ್ಬ ಮಗನ ಮನೆ ಮೇಲೆ ಎನ್‍ಐಎ ದಾಳಿ
Advertisement
NIA Files Chargesheet Against Eight ISIS Terrorists in ISIS Kerala Module case (RC-05/2021/NIA/DLI) pic.twitter.com/jl1Fw48iZg
— NIA India (@NIA_India) January 29, 2022
Advertisement
ಈ ಎಂಟು ಆರೋಪಿಗಳು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಐಸಿಸ್‍ಗೆ ಜನರನ್ನು ನೇಮಕ ಮಾಡುವುದು, ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸಿವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಉಗ್ರ ಚಟುವಟಿಕೆ ಸಂಬಂಧಿಸಿ 5 ಮಾರ್ಚ್ 2021ರಂದು ಕೇರಳದ ಮಹಮ್ಮದ್ ಅಮೀನ್ ಮತ್ತು ಆತನ ಇಬ್ಬರು ಸಹಚರರನ್ನು ಎನ್‍ಐಎ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿತ್ತು. ಆ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು, ಭಟ್ಕಳ, ಬೆಂಗಳೂರು, ಜಮ್ಮು ಕಾಶ್ಮೀರದಲ್ಲಿ ದಾಳಿ ನಡೆಸಿ ಈ ಎಂಟು ಜನರನ್ನು ಬಂಧಿಸಲಾಗಿತ್ತು. ಲ್ಯಾಪ್‍ಟಾಪ್, ಸಿಮ್ ಕಾರ್ಡ್, ಹಾರ್ಡ್ ಡಿಸ್ಕ್, ಡ್ರೈವ್ ಸಹಿತ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿತ್ತು. ಈ ಎಲ್ಲದರ ಬಗ್ಗೆಯೂ ಜಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ಹೂಪ್, ಇನ್‍ಸ್ಟಾಗ್ರಾಮ್ ಬಳಸಿಕೊಂಡು ಈ ಆರೋಪಿಗಳು ಐಸಿಸ್‍ಗೆ ಜನರನ್ನು ನೇಮಿಸುತ್ತಿದ್ದರು. ದೇಶದಲ್ಲೇ ಇದ್ದುಕೊಂಡು ಉಗ್ರ ಸಂಘಟನೆ ಐಸಿಸ್ ಜೊತೆ ನೇರ ಸಂಪರ್ಕ ಹೊಂದಿರುವುದು ಎನ್‍ಐಎ ವಿಚಾರಣೆಯಲ್ಲಿ ತಿಳಿದುಬಂದಿದೆ.
Advertisement