– ಬೆಂಗಳೂರು ಸೇರಿದಂತೆ 11 ಕಡೆ ಎನ್‌ಐಎ ದಾಳಿ
– ಕರ್ನಾಟಕದ ಇಬ್ಬರು ವೈದ್ಯರು ವಶ
ನವದೆಹಲಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣದ ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (NIA) 4 ರಾಜ್ಯಗಳ 11 ಕಡೆ ರೇಡ್ ಮಾಡಿದೆ.
ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿ ಐದಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ. ಮತೀನ್, ಶಾಝೀಬ್ ನಾಲ್ಕು ವರ್ಷ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ನೆರವು ನೀಡಿದವರಿಗಾಗಿ ಎನ್‌ಐಎ ಈ ಕಾರ್ಯಾಚರಣೆ ಮಾಡಿದೆ.
Advertisement
Advertisement
ತಮಿಳುನಾಡಿನ ಕೊಯಮತ್ತೂರಿನ (Tamilnadu Coimbatore) ಖಾಸಗಿ ಆಸ್ಪತ್ರೆಯೊಂದರ ಮೇಲೆ ರೇಡ್ ಮಾಡಿದ ಎನ್‌ಐಎ, ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಶಂಕೆ ಮೇರೆಗೆ ಕರ್ನಾಟಕ ಮೂಲದ ಇಬ್ಬರು ವೈದ್ಯರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಪಾತಕಿಗಳಿಗೆ ಹಣಕಾಸು ನೆರವು ನೀಡಿರುವ ಶಂಕೆ ವ್ಯಕ್ತವಾಗಿದೆ.
Advertisement
ಮತ್ತೊಂದು ಕಡೆ ಆಂಧ್ರದ ರಾಯದುರ್ಗದಲ್ಲಿ ನಿವೃತ್ತ ಶಿಕ್ಷಕ ಅಬ್ದುಲ್ ಮನೆ ಮೇಲೆಯೂ ಎನ್‌ಐಎ ದಾಳಿ ನಡೆಸಿ, ಅವರ ಪುತ್ರ ಸೊಹೇಲ್‌ನನ್ನು ವಶಕ್ಕೆ ಪಡೆದಿದೆ. ಈತ ಬೆಂಗಳೂರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ಸೊಹೇಲ್ ಬ್ಯಾಂಕ್ ಖಾತೆಗೆ ದಿಢೀರ್ ಎಂದು ಭಾರೀ ಮೊತ್ತದ ಹಣ ಜಮೆಯಾಗಿದ್ದ ಬಗ್ಗೆ ಅವರ ಕುಟುಂಬಸ್ಥರನ್ನು ಎನ್‌ಐಎ ಪ್ರಶ್ನಿಸಿದೆ. ತೆಲಂಗಾಣದಲ್ಲಿಯೂ ಎನ್‌ಐಎ ರೇಡ್ ಮಾಡಿದೆ. ಹಲವು ಮಹತ್ವದ ದಾಖಲೆಗಳನ್ನು ಸೀಜ್ ಮಾಡಿದೆ. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ
Advertisement