ಚಿಕ್ಕಮಗಳೂರಿನಲ್ಲೂ ಉಗ್ರರ ಜಾಲ – ರಾಮೇಶ್ವರಂ ಕೆಫೆ ಸ್ಫೋಟ, ಓರ್ವ ಅರೆಸ್ಟ್‌

Public TV
2 Min Read
the rameshwaram cafe explosion

ಬೆಂಗಳೂರು: ಮಲೆನಾಡಿನ ಶಿವಮೊಗ್ಗ ಆಯ್ತು, ಈಗ ಕಾಫಿನಾಡಿನಲ್ಲೂ ಉಗ್ರರ ಜಾಲ ಇರುವುದು ಪತ್ತೆಯಾಗಿದ್ದು ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಚಿಕ್ಕಮಗಳೂರು (Chikkamgaluru) ಕಳಸದಲ್ಲಿ (Kalasa) ಆರೋಪಿಯೊಬ್ಬನನ್ನು ಬಂಧಿಸಿದೆ.

ಮುಝಮ್ಮಿಲ್ ಶರೀಫ್‌(30) ಬಂಧಿತ ಆರೋಪಿ. ಬುಧವಾರ ಮುಝಮ್ಮಿಲ್ ಶರೀಫ್‌ (Muzammil Shareef) ಮನೆ ಮೇಲೆ ಎನ್‌ಐಎ ದಾಳಿ ನಡೆಸಿ ವಶಕ್ಕೆ ಪಡೆದಿತ್ತು. ಇಂದು ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಿದ ಬಳಿಕ ಆತನನ್ನು ಬಂಧಿಸಲಾಗಿದೆ.

ಬಾಂಬ್‌ ಸ್ಫೋಟ ನಡೆದ ದಿನ ಆತ ಬೆಂಗಳೂರಿನಲ್ಲೇ ಇದ್ದು ಸ್ಫೋಟದ ಸಂಚುಕೋರ ಮುಸ್ಸಾವಿರ್ ಶಜೀಬ್ ಹುಸೇನ್‌ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಬಂದಿದೆ.

RAMESHWARAM CAFE BOMBER

ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ತಂಡಗಳು ಭೇದಿಸಿದ ನಂತರ ದಾಳಿಯ ಸಂಚುಕೋರ ಮುಝಮ್ಮಿಲ್ ಶರೀಫ್‌ನನ್ನು ಬಂಧಿಸಿದೆ. ಇದನ್ನೂ ಓದಿ: 70 ಲಕ್ಷದ ಆಸ್ತಿ ಘೋಷಿಸಿದ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ

ಆರಂಭದಲ್ಲಿ ಸ್ಫೋಟ ನಡೆಸಿದ ಪ್ರಮುಖ ಸಂಚುಕೋರ ಮುಸ್ಸಾವಿರ್ ಶಜೀಬ್ ಹುಸೇನ್‌ ಮತ್ತು ಅಬ್ದುಲ್ ಮಥೀನ್‌ನನ್ನು ತನಿಖೆಯಿಂದ ಪತ್ತೆ ಹಚ್ಚಲಾಗಿತ್ತು. ಎನ್‌ಐಎಗೆ ಬೇಕಾಗಿರುವ ಈ ಆರೋಪಿಗಳು ಈಗ ಪರಾರಿಯಾಗಿದ್ದಾರೆ.

NIA CCB Find Cap Of Rameshwaram Cafe Bomb Blast Accused Near Hoodi Bengaluru

ಈ ಮೂವರು ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ತಪಾಸಣೆಯ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.  ಇದನ್ನೂ ಓದಿ: ಡಿಕೆ ಸುರೇಶ್‌ ಬರೋಬ್ಬರಿ 593 ಕೋಟಿ ರೂ. ಆಸ್ತಿಗೆ ಒಡೆಯ!

ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯುವ ಪ್ರಯತ್ನಗಳು ನಡೆಯುತ್ತಿದೆ ಎಂದು ಎನ್‌ಐಎ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಭಟ್ಕಳದಲ್ಲೂ ವಿಚಾರಣೆ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಇಕ್ಬಾಲ್ ಭಟ್ಕಳನ ಪುತ್ರ ಅಬ್ದುಲ್ ರಾಬಿದ್‍ಗೆ ರಾಷ್ಟ್ರೀಯ ತನಿಖಾ ದಳ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿ ಬಸ್ ಮೂಲಕ ಭಟ್ಕಳಕ್ಕೆ ಬಂದಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎನ್‌ಐಎ ತಂಡ ತನಿಖೆ ಚುರುಕುಗೊಳಿಸಿದೆ.

Share This Article