ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ (Bengaluru Mysuru Expressway) ಸಂಚಾರಕ್ಕೆ ಮುಕ್ತಗೊಂಡಿದ್ದು, ಮಾರ್ಚ್ 14ರಿಂದಲೇ ಟೋಲ್ (Toll) ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಯಹಳ್ಳಿ ಮತ್ತು ಕಣಮಿಣಕಿಯ ಟೋಲ್‌ಗಳು ಕಾರ್ಯಾಚರಣೆ ಆರಂಭಿಸಲಿವೆ. ಬೆಂಗಳೂರಿನಿಂದ ಮೈಸೂರು ಕಡೆ ಹೋಗುವವರು ಕಣಮಿಣಕಿ ಬಳಿ, ಮೈಸೂರು ಕಡೆಯಿಂದ ಬೆಂಗಳೂರು ಬರುವವರು ಶೇಷಗಿರಿಹಳ್ಳಿಯ ಟೋಲ್‌ನಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ. ಮೊದಲ ಹಂತದ 55.63 ಕಿಮೀ ರಸ್ತೆಗೆ ಶುಲ್ಕ ಸಂಗ್ರಹ ಮಾಡಲಾಗುತ್ತದೆ ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ
ಈ ಬೆನ್ನಲ್ಲೇ ಕಾಮಗಾರಿ ಪೂರ್ಣಗೊಳಿಸದೇ, ಸರ್ವೀಸ್ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡಬಾರದೆಂದು ಹಲವು ಸಂಘ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ನಡುವೆ ಟೋಲ್ ಸಂಗ್ರಹ ಮಾಡಲು ಎನ್‌ಹೆಚ್‌ಎಐ (NHAI) ಮುಂದಾಗಿದೆ. ಮಂಗಳವಾರ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುಮತಿ
ಪ್ರಧಾನಿ ನರೇಂದ್ರ ಮೋದಿ (NarendraModi) ಭಾನುವಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳಿಸಿದ ಬಳಿಕ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಟೋಲ್ ಶುಲ್ಕ ಎಷ್ಟು – ಹೇಗೆ?
NHAI ಟೋಲ್ ಸಂಗ್ರಹಿಸಲು 6 ರೀತಿಯಲ್ಲಿ ವಾಹನಗಳನ್ನ ವರ್ಗೀಕರಿಸಲಾಗಿದೆ. ನಿಗದಿತ ಶುಲ್ಕದ ಪ್ರಕಾರ ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ ಒಂದು ಟ್ರಿಪ್‌ಗೆ ಕಾರು ಮಾಲೀಕರು 135 ರೂ. ಪಾವತಿಸಬೇಕಾಗುತ್ತದೆ. ಅಲ್ಲದೇ ಒಂದೇ ದಿನದಲ್ಲಿ ಮರಳಿದರೆ, 205 ರೂ. ನಿಗದಿಮಾಡಲಾಗಿದೆ. ಮಿನಿ ಬಸ್‌ಗೆ 220 ರೂ. ಹಾಗೂ ಬಸ್‌ಗೆ ಒಂದು ಬಾರಿ ಪ್ರಯಾಣಕ್ಕೆ 460 ರೂ. ಶುಲ್ಕ ವಿಧಿಸಲಾಗುತ್ತದೆ ಎಂದು NHAI ಹೇಳಿದೆ.