ನವದೆಹಲಿ: ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದ ಜಮ್ಮು-ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದ ದರ್ಶನ ಪಡೆಯುವ ಭಕ್ತರ ಸಂಖ್ಯೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು (ಎನ್‍ಜಿಟಿ) ಮಿತಿ ವಿಧಿಸಿದ್ದು, ಪ್ರತಿದಿನ ಗರಿಷ್ಟ 50 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕೆಂದು ಆದೇಶಿಸಿದೆ.
ವೈಷ್ಣೋ ದೇವಾಲಯಕ್ಕೆ ತೆರಳಲು ಕತ್ತೆ ಹಾಗೂ ಇತರೇ ಪ್ರಾಣಿಗಳನ್ನು ಬಳಕೆ ಮಾಡುವ ಕುರಿತು ಪ್ರಶ್ನಿಸಿ ಎನ್‍ಜಿಟಿಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಸ್ವತಂತ್ರ ಕುಮಾರ್ ಅವರ ನ್ಯಾಯಪೀಠವು ದೇವಾಲಯದಲ್ಲಿ ದಿನ 50 ಸಾವಿರ ಭಕ್ತರು ಮಾತ್ರ ದರ್ಶನಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿತು.
Advertisement
Advertisement
ದೇವಿಯ ದರ್ಶನಕ್ಕೆ ತೆರಳುವ ವೇಳೆ ಉಂಟಾಗುವ ಅಹಿತಕರ ಘಟನೆಗಳನ್ನು ತಪ್ಪಿಸಲು ಈ ಕ್ರಮಕೈಗೊಂಡಿದ್ದು, ಸಂಖ್ಯೆಗಿಂತ ಜಾಸ್ತಿ ಭಕ್ತರು ಆಗಮಿಸಿದ್ದಲ್ಲಿ ಜಮ್ಮು ಕಾಶ್ಮೀರದ ಕತ್ರಾ ಅಥವಾ ಅರ್ಧಕುಮಾರಿಯಲ್ಲಿ ನೆಲೆ ಕಲ್ಪಿಸಬೇಕೆಂದು ಸೂಚಿಸಿದೆ.
Advertisement
ಅಲ್ಲದೇ ದೇವಾಲಯಕ್ಕೆ ಭೇಟಿ ನೀಡಲು ನಿರ್ಮಾಣ ಮಾಡಲಾಗಿರುವ ಹೊಸ ಮಾರ್ಗದಲ್ಲಿ ಪ್ರಾಣಿಗಳನ್ನು ಬಳಕೆ ಮಾಡದಂತೆ ಎನ್‍ಜಿಟಿ ಸೂಚಿಸಿದೆ. ಹೊಸ ಮಾರ್ಗವು ನವೆಂಬರ್ 24 ರಿಂದ ಬಳಕೆಗೆ ಮುಕ್ತವಾಗಲಿದ್ದು, ಬ್ಯಾಟರಿ ಚಾಲಿತ ಕಾರು ಹಾಗೂ ಪಾದಚಾರಿಗಳು ಮಾತ್ರ ಈ ಮಾರ್ಗವನ್ನು ಬಳಸಬೇಕು, ಈ ನಿಯಮವನ್ನು ಉಲ್ಲಂಘಿಸಿದರೆ 2 ಸಾವಿರ ರೂ. ದಂಡವನ್ನು ವಿಧಿಸಲು ನಿರ್ದೇಶನ ನೀಡಿದೆ.
Advertisement
ಇನ್ನು ದೇವಾಲಯಕ್ಕೆ ಹಳೆ ಮಾರ್ಗವಾಗಿ ಪ್ರಾಣಿಗಳ ಮೇಲೆ ಸಂಚಾರ ಮಾಡುವುದನ್ನು ಕ್ರಮೇಣ ಕಡಿಮೆ ಮಾಡಲಾಗುತ್ತದೆ. ಯಾತ್ರೆಯಲ್ಲಿ ಸಂಪೂರ್ಣವಾಗಿ ಪ್ರಾಣಿಗಳ ಮೇಲಿನ ಸಂಚಾರವನ್ನು ನಿಷೇಧಿಸುವ ಕುರಿತು ಸರ್ಕಾರದ ಅಭಿಪ್ರಾಯ ನೀಡುವಂತೆ ಸೂಚಿಸಿದೆ.
ಕತ್ರಾ ಪಟ್ಟಣದಿಂದ ಸುಮಾರು 46 ಕಿ.ಮೀ ದೂರದಲ್ಲಿ ದೇವಾಲಯವಿದೆ. ಪ್ರತಿವರ್ಷ ಸುಮಾರು 80 ಲಕ್ಷ ಜನರು ದೇವಿಯ ದರ್ಶನವನ್ನು ಪಡೆಯುತ್ತಾರೆ.