Connect with us

Bengaluru City

ಮುಂದಿನ ವರ್ಷ ಈ ತಿಂಗಳಲ್ಲಿ ರಿಲೀಸ್ ಆಗಲಿದೆ ಮುನಿರತ್ನ ಕುರುಕ್ಷೇತ್ರ

Published

on

ಬೆಂಗಳೂರು: ಅಲ್ಲಲ್ಲಿ ಒಂದೊಂದು ಫೋಟೋ ರಿಲೀಸ್ ಆಗಿದ್ದು ಬಿಟ್ಟರೆ `ಕುರುಕ್ಷೇತ್ರ’ ಚಿತ್ರದ ಬಗ್ಗೆ ಅದ್ಯಾರೂ ಮಾತನಾಡಿಯೇ ಇರಲಿಲ್ಲ. ಈ ಚಿತ್ರದ ಬಗ್ಗೆ ಅಂತೆ ಕಂತೆಗಳೇ ಸುದ್ದಿಯಾಗುತ್ತಿದ್ದವು. ದರ್ಶನ್ ಅಭಿನಯಿಸಿರುವ ಈ ಚಿತ್ರ ಹಾಗಂತೆ, ಹೀಗಂತೆ ಎನ್ನುವ ವಿಷಯ ಬಿಟ್ಟು ಅಸಲಿ ಸತ್ಯ ಏನು ಎನ್ನುವುದನ್ನು ಬಿಚ್ಚಿಡಲಿದ್ದೇವೆ.

ಹೈದರಾಬಾದ್ ನಲ್ಲಿ ಕುರುಕ್ಷೇತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರತಂಡ ಇದುವರೆಗೂ ಮಾಧ್ಯಮದ ಜೊತೆ ಒಂದೇ ಒಂದು ಸುಳಿವು ಬಿಟ್ಟುಕೊಟ್ಟಿಲ್ಲ. ಒಂದು ಸಾಮಾನ್ಯ ಸಿನಿಮಾ ತಯಾರಾಗಬೇಕು ಎಂದಾದರೆ ಒಂದು ವರ್ಷ ಬೇಕಾಗುತ್ತೆ. ಹೀಗಿರುವಾಗ ಅದ್ಧೂರಿ ಗ್ರಾಫಿಕ್ಸ್ ಕಮ್ ಬಿಗ್ ಬಜೆಟ್ ಸಿನಿಮಾ ಮಾಡಬೇಕಾದರೆ ಸಿಕ್ಕಾಪಟ್ಟೆ ಟೈಮ್ ಬೇಕು. ಹೀಗಿದ್ದರೂ ಜನವರಿಯ ಸಂಕ್ರಾಂತಿ ಹಬ್ಬಕ್ಕೆ ಇದು ತೆರೆಗೆ ಬರುತ್ತೆ ಎನ್ನಲಾಗುತ್ತಿತ್ತು. ಆದರೆ ಈಗ ಕುರುಕ್ಷೇತ್ರ ತೆರೆ ಕಾಣೋದು ಜನವರಿಯಲ್ಲಿ ಅಲ್ಲ ಬದಲಿಗೆ ಫೆಬ್ರವರಿ ಕೊನೇ ವಾರದಲ್ಲಿ ಅಂತ ಗೊತ್ತಾಗಿದೆ.

ಮಹಾಭಾರತದ ವೀರಾಧಿವೀರ ಯೋಧರಲ್ಲಿ ಅಭಿಮನ್ಯು ಕೂಡ ಒಬ್ಬ. ಚಿಕ್ಕ ವಯಸ್ಸಿನಲ್ಲಿಯೇ ಅಭಿಮನ್ಯು ಕೌರವರಿಗೆ ಬೆವರಿಳಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಅಂಥ ಶೂರನ ಪಾತ್ರ ಮಾಡುತ್ತಿರೋದು ಜಾಗ್ವಾರ್ ಹುಡುಗ ಹೆಚ್‍ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್.

ಕುರುಕ್ಷೇತ್ರದ ಕಥೆ ಬಿಡಿ ಗೊತ್ತಿರೋ ವಿಚಾರ ಅಂದುಕೊಂಡರೆ ಅದು ತಪ್ಪು. ದಿಗ್ಗಜರೆಲ್ಲಾ ಒಟ್ಟಿಗೆ ಸೇರಿ ಅಭಿನಯಿಸುತ್ತಿರುವ ಇದರಲ್ಲಿ ಪ್ರತಿ ಕ್ಷಣವೂ ಕುತೂಹಲ ಫಿಕ್ಸ್. ಅದಕ್ಕೆ ಒಂದು ಚಿಕ್ಕ ಉದಾಹರಣೆ ಮೊದಲಾರ್ಧದಲ್ಲಿ ಅಭಿಮನ್ಯು ಪಾತ್ರಧಾರಿ ನಿಖಿಲ್ ಮಾಡಿರುವ ಚಕ್ರವ್ಯೂಹದ ಮಹಾ ಯುದ್ಧ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ಪಾತ್ರದಲ್ಲಿ ಅಟ್ಟಹಾಸ ಮೊದಲಾರ್ಧದಲ್ಲಿ ವಾರೇ ವ್ಹಾ ಎಂದೆನ್ನಿಸಿದ್ದರೆ ದ್ವೀತಿಯಾರ್ಧದಲ್ಲಿ ಭಾರತೀಯ ಚಿತ್ರರಂಗವೇ ಒಮ್ಮೆ ಸ್ಯಾಂಡಲ್‍ವುಡ್ ಕಡೆ ತಿರುಗಿ ನೋಡುವಂಥ ಯುದ್ಧದ ಸನ್ನಿವೇಶ ನೋಡಬಹುದು. ಬಾಹುಬಲಿ ಚಿತ್ರದ ಫೈಟ್ ಮಾಸ್ಟರ್ ಸೋಲೋಮನ್ ಗರಡಿಯಲ್ಲಿ ಯುದ್ಧದ ಸನ್ನಿವೇಶಗಳು ಮೂಡಿಬಂದಿವೆ. ಅದೊಂದು ದೃಶ್ಯದಲ್ಲಿ ನಾಲ್ಕು ಕುದುರೆಗಳ ಮೇಲೇರಿ ಧಗಧಗಿಸುತ್ತಾ ಬರುವ ಅಭಿಮನ್ಯುವನ್ನು ನೋಡೋಕೆ ಎರಡು ಕಣ್ಣು ಸಾಲುವುದಿಲ್ಲವಂತೆ.

ಅಭಿಮನ್ಯು ಪಾತ್ರದ ಸುತ್ತ ಹೆಣೆದ ಟೀಸರ್ ಡಿಸೆಂಬರ್ 16, ಹೆಚ್‍ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದಂದು ಹೊರಬೀಳಲಿದೆ. ಶೂಟಿಂಗ್ ಕೊಂಚ ಬಾಕಿ ಇದೆ. ಹೀಗಾಗಿಯೇ ಫೆಬ್ರವರಿ ಕೊನೆಯ ವಾರದಲ್ಲಿ ಕುರುಕ್ಷೇತ್ರ ತೆರೆ ಮೇಲೆ ಬರಲಿದೆ ಅಂತ ಹೇಳಲಾಗಿದೆ.

Click to comment

Leave a Reply

Your email address will not be published. Required fields are marked *