ಬೆಂಗಳೂರು: ಆಪರೇಷನ್ ಹಸ್ತಕ್ಕೆ (Operation Hasta) ಮುಂದಿನ ವಾರ ನಿರ್ಣಾಯಕ ವಾರ ಎಂದು ಹೇಳಲಾಗುತ್ತಿದೆ. ಸೋಮಶೇಖರ್, ಶಿವರಾಂ ಹೆಬ್ಬಾರ್ ಹೆಸರಿನ ಜೊತೆಗೆ ಶಂಕರ್ ಪಾಟೀಲ್ ಮುನೇನಕೊಪ್ಪ (Shankar Patil Munenakoppa) ಮತ್ತು ಎಸ್‍ಐ ಚಿಕ್ಕನಗೌಡ ಕಾಂಗ್ರೆಸ್‍ಗೆ (Congress) ಬರುತ್ತಾರೆ ಎಂಬ ವದಂತಿ ಹಬ್ಬಿದೆ.
ಮುನೇನಕೊಪ್ಪ-ಚಿಕ್ಕನಗೌಡ ಬಗ್ಗೆ ಸಚಿವ ಸಂತೋಷ್ ಲಾಡ್ (Santosh Lad) ಸುಳಿವು ಕೊಟ್ಟಿದ್ದಾರೆ. ಇಬ್ಬರು ಪಕ್ಷಕ್ಕೆ ಬಂದರೆ ಧಾರವಾಡ ಜಿಲ್ಲೆಯಲ್ಲಿ (Dharwad District) ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ. ಈ ಬಗ್ಗೆ ಮುನೇನಕೊಪ್ಪ ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದಿದ್ದಾರೆ. ಇದನ್ನೂ ಓದಿ: ಬಾಡಿಗೆಗೆ ಬಂದವರು ಶವವಾಗಿ ಪತ್ತೆ – ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು
Advertisement
Advertisement
ಮೋದಿ ಸ್ವಾಗತಕ್ಕೆ ಬಾರದೇ ಅಸಮಾಧಾನಗೊಂಡಿರುವ ಎಸ್ ಟಿ ಸೋಮಶೇಖರ್ (ST Somashekar) ಜೊತೆ ಮಾತನಾಡುವುದಾಗಿ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಶಿವರಾಮ್ ಹೆಬ್ಬಾರ್ ಕಾಂಗ್ರೆಸ್‌ಗೆ ಬರುವುದು ಬೇಡ ಎಂದು ಕೈ ಕಾರ್ಯಕರ್ತರು ಸಭೆಯಲ್ಲಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಕಾಂಗ್ರೆಸ್‍ಗೆ ಬಂದರೆ ಶಾಸಕರನ್ನಾಗಿ ಮಾಡುವುದಿಲ್ಲ. ಬೇಕಾದರೆ ಸಂಸದರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಲೋಕದಲ್ಲಿ ಜೈ ಹಿಂದ್ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ
Advertisement
ಈ ಮಧ್ಯೆ ಬಿಜೆಪಿ ಶಾಸಕರ ಬಳಿಕ ಜೆಡಿಎಸ್ ಶಾಸಕರಿಗೂ ಡಿಸಿಎಂ ಡಿಕೆ ಶಿವಕುಮಾರ್ ಗಾಳ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೆಡಿಎಸ್‍ಗೂ ಕೂಡ ಆಪರೇಷನ್ ಹಸ್ತದ ಭಯ ಶುರುವಾದಂತೆ ಕಾಣುತ್ತಿದೆ.
Advertisement
Web Stories