ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ. ಹೀಗಂತ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಆಪ್ತ ಸಹಾಯಕ ಕಿರಣ್ ಬಡಿಗೇರ ಅಬರು ನಿರಾಣಿ ಹುಟ್ಟುಹಬ್ಬಕ್ಕೆ ಶುಭಕೋರಿ ಪೋಸ್ಟರ್ ಹಾಕಿದ್ದಾರೆ. ಅದರಲ್ಲಿ ಮುಂದಿನ ಸಿಎಂ ಎಂಬ ಪದ ಬಳಕೆ ಮಾಡಲಾಗಿತ್ತು. ಅಲ್ಲದೆ ಜಮಖಂಡಿ ಜಿಲ್ಲೆ ಕನಸು ನನಸು ಮಾಡುವ ನಾಯಕನಿಗೆ ಶುಭಾಶಯ ಎಂದು ತಿಳಿಸಿಸಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಾಕಷ್ಟು ವೈರಲ್ ಆಗಿತ್ತು. ಈ ಬೆನ್ನಲ್ಲೇ ಬ್ಯಾನರ್ ತೆರವುಗೊಳಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರ ಮುರುಗೇಶ್ ನಿರಾಣಿ ಅವರು ಈ ಮೂಲಕ ಬೀಳಗಿ ಕ್ಷೇತ್ರದಲ್ಲಿ ಸೋಲಿನ ಭಯ ಕಾಡ್ತಿದಿಯಾ..?, ನಿರಾಣಿ ಅವರು ಬೀಳಗಿ ಕ್ಷೇತ್ರ ಬಿಟ್ಟು ಪಂಚಮಸಾಲಿ ಸಮುದಾಯ ಹೆಚ್ಚಿರೋ ಜಮಖಂಡಿ ಕಡೆ ಹೊರಟ್ರಾ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಬಿಜೆಪಿ ಜೊತೆಗೆ ಯಾವುದೇ ರಾಜಿ ಇಲ್ಲ – ದೆಹಲಿ ಭೇಟಿಗೂ ಮುನ್ನವೇ ಸ್ಟಾಲಿನ್ ಸ್ಪಷ್ಟನೆ
ಫೆಬ್ರವರಿಯಲ್ಲಿ ಪಂಚಮಸಾಲಿ 3ನೇ ಪೀಠ ಜಮಖಂಡಿಯಲ್ಲಿ ಸ್ಥಾಪನೆಯಾಗಿದೆ. ಪೀಠ ಸ್ಥಾಪನೆ ನೋಡಿದ್ರೆ ನಿರಾಣಿ ಜಮಖಂಡಿ ಕ್ಷೇತ್ರದಲ್ಲಿ ನಿಲ್ಲೋದು ಪಕ್ಕಾನಾ ಅನ್ನೊ ಕುತೂಹಲ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ನಿರಾಣಿ ಸಹೋದರ ಸಂಗಮೇಶ ಜಮಖಂಡಿಯಲ್ಲಿ ಬಂಡಾಯವಾಗಿ ಸ್ಪರ್ಧಿಸೋಕೆ ರೆಡಿಯಾಗಿದ್ದರು. ಬಳಿಕ ಯಡಿಯೂರಪ್ಪ ಮಧ್ಯಸ್ಥಿಕೆಯಲ್ಲಿ ಸಂಗಮೇಶ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.