ಹಾವೇರಿ: ಮೈಸೂರಿನಲ್ಲಿ ಸಾಧನಾ ಸಮಾವೇಶಕ್ಕೆ ಸಿದ್ಧತೆಗಳಾಗುತ್ತಿದೆ. ಮುಂದೆ ಉತ್ತರ ಕರ್ನಾಟಕದಲ್ಲಿಯೂ ಸಮಾವೇಶ ಮಾಡ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದ್ದಾರೆ.
ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರೇ 5 ವರ್ಷ ಇರುತ್ತೇನೆಂದು ಹೇಳಿದ್ದಾರೆ. ಇದರ ಬಗ್ಗೆ ನಾವು ಮಾತನಾಡುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಎಫೆಕ್ಟ್ – ಉಸಿರುಗಟ್ಟಿ ಕಾಪಾಡಿ ಎಂದು ಕೂಗಿಕೊಂಡ ಮಹಿಳೆ
ಅಂಗನವಾಡಿ ಹಾಲಿನ ಪುಡಿಯಲ್ಲಿ ಗೋಲ್‌ಮಾಲ್ ಆಗಿದೆ ಎನ್ನಲಾಗಿದೆ. ಶಿಗ್ಗಾಂವಿಯಲ್ಲಿನ ಅಂಗನವಾಡಿಗೆ ಭೇಟಿ ಮಾಡಿ 25 ಕೆಜಿ ಪ್ಯಾಕೇಟ್ ಓಪನ್ ಮಾಡಿ ನೋಡಿದ್ದೇನೆ, ಸರಿಯಾಗಿದೆ. ತಡಸದಲ್ಲಿ ಎರಡು ಅಂಗನವಾಡಿ ಭೇಟಿ ಮಾಡಿದ್ದೇನೆ. ಎಲ್ಲವೂ ಸರಿಯಾಗಿದೆ. ತನಿಖೆ ನಡೆಸಿ ಮುಂದೆ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳೆ ಬೇರು ಹೊಸ ಚಿಗುರು ರೀತಿ ವಿಜಯೇಂದ್ರ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತಿದ್ದಾರೆ: ರೇಣುಕಾಚಾರ್ಯ
ಕಳಪೆ ಗೊಬ್ಬರ ವಿತರಿಸಿದ್ರೆ ಕ್ರಮ
ಹಾವೇರಿ ಮೆಡಿಕಲ್ ಕಾಲೇಜು ಸಿಬ್ಬಂದಿ ನೇಮಕದಲ್ಲಿ ಅಕ್ರಮದ ಬಗ್ಗೆ ಡೀನ್ ಜೊತೆಗೆ ಮಾತನಾಡಿದ್ದೇವೆ. ತಾಂತ್ರಿಕ ಸಮಸ್ಯೆಗಳಿಂದ ಆಗಿದೆ. ಅಕ್ರಮ ಆಗಿದ್ದರೆ, ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಯೂರಿಯಾ ಗೊಬ್ಬರದ ಜೊತೆ ಲಿಂಕ್ ಗೊಬ್ಬರ ಮಾಡುತ್ತಿದ್ದಾರೆ. ರಾಜ್ಯಕ್ಕೆ ಬೇಕಾದಷ್ಟು ಯೂರಿಯಾ ಗೊಬ್ಬರ ಕೂಡಲು ಕೇಂದ್ರದಿಂದ ಆಗುತ್ತಿಲ್ಲ. ಕಳಪೆ ಗೊಬ್ಬರದ ಬಗ್ಗೆ 4 ಕೇಸ್ ಆಗಿವೆ. ನಕಲಿ ಗೊಬ್ಬರ ಮಾರಾಟಗಾರರ ಬಂಧನಕ್ಕೂ ಕ್ರಮ ಕೈಗೊಳ್ಳುತ್ತೇವೆ. ಅವರ ಲೈಸನ್ಸ್ ರದ್ದು ಮಾಡಿದ್ದೇವೆ. ಉತ್ತಮ ಗೊಬ್ಬರ ಮಾರಾಟ ಮಾಡಬೇಕೆಂದು ಲೈಸನ್ಸ್ ಕೊಟ್ಟಿದ್ದೇವೆ. ಕಳಪೆ ಗೊಬ್ಬರ ವಿತರಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.