ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ, ಡಿಕೆಶಿ ಹೇಳಿಕೆ ತಪ್ಪಲ್ಲ: ಚಂದ್ರಶೇಖರ್

Public TV
1 Min Read
GC Chandrashekar

ಬೆಂಗಳೂರು: ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರ ಹೇಳಿಕೆ ತಪ್ಪೇನು ಅಲ್ಲ ಎಂದು ಕಾರ್ಯಾಧ್ಯಕ್ಷ ಚಂದ್ರಶೇಖರ್ ಡಿಕೆಶಿ ಪರ ಬ್ಯಾಟ್‌ ಬೀಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇನ್ನೂ ಮೂರೂವರೆ ವರ್ಷದಲ್ಲಿ ಚುನಾವಣೆ ಇದೆ.‌ ಈಗಲೇ ಯಾಕೆ ಇವೆಲ್ಲ. ಕೆಪಿಸಿಸಿ ಅಧ್ಯಕ್ಷರು ಹಾಗೆ ಹೇಳೋದು ತಪ್ಪಲ್ಲ. ರಾಜ್ಯದಲ್ಲಿ ಪಕ್ಷಕ್ಕೆ (Congress) ಸುಪ್ರೀಂ ಅಂದರೆ ಕೆಪಿಸಿಸಿ ಅಧ್ಯಕ್ಷರು. ಅವರು ಹೇಳೋದು ತಪ್ಪಿಲ್ಲ. ಮುಂದಿನ ಚುನಾವಣೆ ಅಂದರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಹೇಳಿರಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ ರಣವೀರ್‌ ಅಲಹಬಾದಿಯಾ ಕೀಳು ಹೇಳಿಕೆ ಕೇಸ್‌ – ರಾಖಿ ಸಾವಂತ್‌ಗೆ ಸಮನ್ಸ್

ಸಿದ್ದರಾಮಯ್ಯ,‌ ಡಿ.ಕೆ ಶಿವಕುಮಾರ್ ನಾಯಕತ್ವ ನಮಗೆ ಶಾಶ್ವತವಾಗಿ ಬೇಕು. ಈ ದೃಷ್ಟಿಯಲ್ಲಿ ಡಿಕೆಶಿ ಹೇಳಿರಬಹುದು. ಅವರು ಹೇಳಿರೋದ್ರಲ್ಲಿ ತಪ್ಪಿಲ್ಲ. ಅವರು 20-25 ವರ್ಷ ರಾಜಕೀಯ ಮಾಡ್ತಾರೆ ಎಂದು ಹೇಳಿದ್ದಾರೆ.

ರಾಜಣ್ಣ ನಡುವಿನ ಗಲಾಟೆ ವಿಚಾರವಾಗಿ, ನಾನು ರಾಜಣ್ಣ ವಿರುದ್ಧ ಮಾತಾಡಿಲ್ಲ. ನಾನು ರಾಜಣ್ಣರನ್ನ ಕೆಣಕಿಲ್ಲ. ನನಗೆ ಪಕ್ಷ ಮುಖ್ಯ‌. ಅದರ ದೃಷ್ಟಿಯಿಂದ ನಾನು ಮಾತಾಡಿದ್ದೆ. ಅವತ್ತು ನಾನು ಮಾತಾಡಿದ್ದು ಪಕ್ಷದ ದೃಷ್ಟಿಯಿಂದ. ಅದನ್ನ ರಾಜಣ್ಣ ತಪ್ಪು ತಿಳಿದುಕೊಂಡು ಮಾತಾಡಿದ್ದಾರೆ. ನನಗೆ ಪಕ್ಷ ಮುಖ್ಯ. ಹೀಗಾಗಿ ನಾನು ಈಗ ಅದನ್ನ ಅಲ್ಲಿಗೆ ಬಿಟ್ಟಿದ್ದೇನೆ ಎಂದಿದ್ದಾರೆ.

ಪತ್ರಕರ್ತರ ಪ್ರಶ್ನೆಯೊಂದಕ್ಕೆ, ನೀವು ಕಾಂಗ್ರೆಸ್ ಬಗ್ಗೆ ಯಾಕೆ ಮಾತಾಡ್ತೀರಾ‌‌? ಬಿಜೆಪಿಯಲ್ಲಿ ದೊಡ್ಡ ಗಲಾಟೆ ಇದೆ. ಅದನ್ನ ತೋರಿಸಿ. ಈಗ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ. ಯಾವ ನಾಯಕರು ಮಾತಾಡ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರತಿ ವಲಯದಲ್ಲೂ ಅತ್ಯುತ್ತಮ ನಾಯಕತ್ವದ ಅಗತ್ಯವಿದೆ – ಮೋದಿ

Share This Article