ನವದೆಹಲಿ: ಬೆಂಗಳೂರಿನಲ್ಲಿ (Bengaluru) ಜುಲೈ 17-18 ರಂದು ನಿಗಧಿಯಾಗಿದ್ದ ವಿಪಕ್ಷಗಳ ಸಭೆಯನ್ನು (All Opposition Meeting) ಮತ್ತೆ ಮುಂದೂಡಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ವಿಪಕ್ಷಗಳ ನಾಯಕರ ಸಭೆ ನಡೆಸಲಿದ್ದು ಶೀಘ್ರದಲ್ಲಿ ದಿನಾಂಕ ನಿಗಧಿ ಮಾಡಲಿದ್ದೇವೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal) ಹೇಳಿದ್ದಾರೆ.
After a hugely successful All-Opposition meeting in Patna, we will be holding the next meeting in Bengaluru on 17 and 18 July, 2023.
We are steadfast in our unwavering resolve to defeat the fascist and undemocratic forces and present a bold vision to take the country forward.
— K C Venugopal (@kcvenugopalmp) July 3, 2023
Advertisement
ನವದೆಹಲಿಯಲ್ಲಿ (NewDelhi) ಮಾತನಾಡಿದ ಅವರು, ಜುಲೈ 20 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಈ ಅವಧಿಯೊಳಗೆ ನಾವು ಖಂಡಿತವಾಗಿ ವಿಪಕ್ಷಗಳ ನಾಯಕರ 2ನೇ ಸಭೆ ಕರೆಯುತ್ತೇವೆ. ದಿನಾಂಕ ಅಂತಿಮಗೊಳಿಸುವ ಬಗ್ಗೆ ಇತರೆ ನಾಯಕರೊಂದಿಗೆ ಚರ್ಚೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ- ವಿಸ್ತೃತ ವರದಿ ಕೇಳಿದ ಸುಪ್ರೀಂ ಕೋರ್ಟ್
Advertisement
Advertisement
ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿ, ಅಜಿತ್ ಪವಾರ್ ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡಿರುವುದು ಮಹಾ ವಿಕಾಸ್ ಅಘಾಡಿ ಒಕ್ಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಇದನ್ನೂ ಓದಿ: Odisha Train Tragedy: ದುರಂತಕ್ಕೆ ಸಿಕ್ತು ಅಸಲಿ ಕಾರಣ – ಸುರಕ್ಷತೆಗೆ ಹೊಸ ಟೆಕ್ನಾಲಜಿ ಬಳಸುವ ಪ್ರಯತ್ನ
Advertisement
ಇತ್ತಿಚೆಗೆ ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು ಈಗ ಅವರ ಬೆಂಬಲವನ್ನೇ ಪಡೆದಿದ್ದಾರೆ. ನಾವು ನಾಟಕ ನೋಡುತ್ತಿದ್ದೇವೆ ಇದೆಲ್ಲ ED ಅಂತಹ ಏಜೆನ್ಸಿಗಳ ಪ್ರಾಯೋಜಿತ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ 2ನೇ ಸಭೆ ನಡೆಸಲು ತಿರ್ಮಾನಿಸಲಾಗಿತ್ತು. ಅಲ್ಲಿ ಹವಾಮಾನ ಸೂಕ್ತವಾಗಿರದ ಹಿನ್ನಲೆ ಬೆಂಗಳೂರಿನಲ್ಲಿ ಜುಲೈ 17-18 ರಂದು ಸಭೆ ಸೇರಲು ನಿರ್ಧರಿಸಿದೆ ಎಂದು ಈ ಹಿಂದೆ ಶರದ್ ಪವಾರ್ ಹೇಳಿದ್ದರು. ಈಗ ಎರಡನೇ ಬಾರಿಗೆ ಸಭೆಯ ದಿನಾಂಕ ಮುಂದೂಡಿಕೆಯಾಗುತ್ತಿದೆ.
Web Stories