ಹೈದರಾಬಾದ್: ಮುಂದಿನ 30 ರಿಂದ 40 ವರ್ಷಗಳೂ ಬಿಜೆಪಿ ಯುಗವಾಗಿರಲಿದ್ದು, ಭಾರತವು `ವಿಶ್ವಗುರು’ ಆಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂದು ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ವಂಶಪಾರಂಪರ್ಯ ರಾಜಕಾರಣ, ಜಾತೀಯತೆ ಹಾಗೂ ತುಷ್ಟೀಕರಣದ ರಾಜಕೀಯ ಮಹಾಪಾಪ. ಹಲವು ವರ್ಷಗಳಿಂದ ದೇಶ ಈ ಪಾಪವನ್ನು ಅನುಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ರಕ್ತದಲ್ಲಿ ಕಾಂಗ್ರೆಸ್ ಇದೆ: JDS ತೊರೆದು ಕಾಂಗ್ರೆಸ್ ಸೇರಿದ ಹೆಚ್.ಆರ್.ಶ್ರೀನಾಥ್
Advertisement
#WATCH | Prime Minister (at the BJP National Executive meeting in Hyderabad) talked of a new politics in the country, a new political culture where the political ecosystem transcends beyond… battering (with 'Sneh Yatra'): BJP leader Ravi Shankar Prasad in Hyderabad pic.twitter.com/8ZGtclkLNX
— ANI (@ANI) July 3, 2022
Advertisement
ಗೃಹ ಸಚಿವರ ಭಾಷಣದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪಕ್ಷವು ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಹಾಗೂ ತುಷ್ಟೀಕರಣ ರಾಜಕೀಯವನ್ನು ಕೊನೆಗಾಣಿಸಲಿದೆ. ದೇಶದ ಮತ್ತು ಜನರ ಅಭಿವೃದ್ಧಿ, ಸಾಧನೆಗಳ ಮೂಲಕ ಪಕ್ಷವನ್ನು ಜನರು ಮಾತನಾಡುವಂತಾಗಬೇಕು ಎಂಬುದನ್ನು ಶಾ ಒತ್ತಿಹೇಳಿರುವುದಾಗಿ ವಿವರಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಸಲಿಂಗಕಾಮಿ ಸ್ನೇಹಿತನನ್ನು ಕೊಂದು ಚೀಲದಲ್ಲಿ ಸುತ್ತಿ ಎಸೆದ ಸ್ನೇಹಿತರು
Advertisement
Advertisement
ಬಿಜೆಪಿ ಸರ್ಕಾರವು ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಕುಟುಂಬ ಆಡಳಿತವನ್ನು ಕೊನೆಗೊಳಿಸಲಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದ್ದು, ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂದು ತಿಳಿಸಿದ್ದಾರೆ.