ನವದೆಹಲಿ: ನಾವು ನಮ್ಮ ಕಾರ್ಯಕರ್ತರು ದೇಶದ ಪ್ರತಿ ಹೊಸ ಮತದಾರರನ್ನು, ಪ್ರತಿಯೊಬ್ಬ ಫಲಾನುಭವಿಯನ್ನು, ಪ್ರತಿ ಸಮುದಾಯವನ್ನು ತಲುಪಬೇಕು. ಎಲ್ಲರ ವಿಶ್ವಾಸವನ್ನು ಗೆಲ್ಲಬೇಕು. ಹಾಗಿದ್ದಾಗ ಮಾತ್ರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) 370 ಹಾಗೂ ಎನ್‌ಡಿಎ (NDA) 400 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಭಾರತ ಮಂಟಪದಲ್ಲಿ ನಡೆದ ಬಿಜೆಪಿ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನದಲ್ಲಿ ನಡೆದ ಚರ್ಚೆ ದೇಶದ ಭವಿಷ್ಯ ಉಜ್ವಲಗೊಳಿಸಲಿದೆ. ಭಾರತವನ್ನು ವಿಕಾಸ ಮಾಡುವುದು ನಮ್ಮ ಸಂಕಲ್ಪ. ಮುಂದಿನ ಐದು ವರ್ಷದಲ್ಲಿ ಭಾರತ ಮೊದಲಿಗಿಂತ ಹೆಚ್ಚು ಕೆಲಸ ಮಾಡಬೇಕು. ಭಾರತ ಅಭಿವೃದ್ಧಿಯಾಗಲು ಬಿಜೆಪಿ ಅದ್ಭುತ ಜಯದೊಂದಿಗೆ ಮರಳಬೇಕಿದೆ ಎಂದರು. ಇದನ್ನೂ ಓದಿ: ಸಿಎಂ ಆಗಿದ್ದೀರಿ, ಪಿಎಂ ಕೂಡ ಆಗಿದ್ದೀರಿ.. ಈಗ ಆರಾಮಾಗಿರಿ ಅಂತ ಹಿರಿಯ ನಾಯಕರು ಹೇಳಿದ್ದರು: ಮೋದಿ
Advertisement
Advertisement
ನಮ್ಮ ಮೂರನೇ ಅವಧಿಯಲ್ಲಿ 2029ರಲ್ಲಿ ಯೂಥ್ ಒಲಂಪಿಕ್ಸ್‌ಗಾಗಿ (Youth Olympics) ತಯಾರಿ ಮಾಡುತ್ತಿದ್ದೇವೆ. 2036ರಲ್ಲಿ ಭಾರತ ಒಲಿಂಪಿಕ್ಸ್ ನೇತೃತ್ವ ವಹಿಸಲಿದೆ. 2030ರ ವೇಳೆಗೆ ರೈಲ್ವೆಯನ್ನು ಕಾರ್ಬನ್ ಮುಕ್ತಗೊಳಿಸಲಿದ್ದೇವೆ. ಪೆಟ್ರೋಲಿಯಂ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲಿದ್ದೇವೆ. ಹಸಿರು ಶಕ್ತಿಗೆ ದೊಡ್ಡ ಶಕ್ತಿ ತುಂಬಲಿದ್ದೇವೆ. ಬೇರೆ ದೇಶದ ಮೇಲಿನ ಅವಲಂಬನೆ ಕಡಿಮೆ ಮಾಡಲಿದ್ದು, ಭವಿಷ್ಯದಲ್ಲಿ ಕೋಟ್ಯಂತರ ಮೌಲ್ಯದ ಪೆಟ್ರೋಲಿಯಂ (Petroleum) ಖರೀದಿಸುವ ಅಗತ್ಯ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರ್ಪಡೆ?