ನವದೆಹಲಿ : ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮಾಧ್ಯಮವಾದ ನ್ಯೂಸ್‌ಕ್ಲಿಕ್ (News Click) ಸಂಪಾದಕ ಪ್ರಬೀರ್ ಪುರ್ಯಕಸ್ಥ (Prabir Purkayastha) ಮತ್ತು ಅದರ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ (Amit Chakravarty) ಅವರನ್ನು ದೆಹಲಿ ನ್ಯಾಯಾಲಯವು ಮಂಗಳವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಭಾರತದಲ್ಲಿ ಚೀನೀ (China) ಪ್ರಚಾರವನ್ನು ಹೆಚ್ಚಿಸಲು ನ್ಯೂಸ್‌ಕ್ಲಿಕ್‌ಗೆ ಹಣ ಪಾವತಿಸಲಾಗುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ (The New York Times) ಈ ಹಿಂದೆ ವರದಿ ಮಾಡಿತ್ತು. ಆಗಸ್ಟ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್ ತನಿಖೆಯು ನ್ಯೂಸ್‌ಕ್ಲಿಕ್ ಅನ್ನು ಚೀನೀ ಪ್ರಚಾರವನ್ನು ಉತ್ತೇಜಿಸಲು ಅಮೆರಿಕದ ಶತಕೋಟ್ಯಧಿಪತಿ ನೆವಿಲ್ಲೆ ರಾಯ್ ಸಿಂಘಮ್‌ನೊಂದಿಗೆ (Neville Roy Singham) ಸಂಪರ್ಕ ಹೊಂದಿದ ನೆಟ್‌ವರ್ಕ್‌ನಿಂದ ಹಣ ಪಡೆದಿದೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು
ಯುಎಪಿಎ ಪ್ರಕರಣದ ಹೊರತಾಗಿ ನ್ಯೂಸ್‌ಕ್ಲಿಕ್ ವಿರುದ್ಧ ಈ ಹಿಂದೆ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣವೂ (Money Laundering Case) ಬಾಕಿ ಉಳಿದಿದೆ. ನ್ಯೂಸ್ ಪೋರ್ಟಲ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ED) ಕಂಪನಿಗೆ ಹೂಡಿಕೆ ಮಾಡಿದವರ ಬಗ್ಗೆ ತನಿಖೆ ಆರಂಭಿಸಿತ್ತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಡಿಜಿಟಲ್ ಮೀಡಿಯಾ ವೆಬ್‌ಸೈಟ್ ವಿರುದ್ಧ ಮಾಡಲಾದ ಆರೋಪಗಳಲ್ಲಿ ಷೇರುಗಳ ಅತಿಯಾದ ಮೌಲ್ಯವರ್ಧನೆ, ವಿದೇಶಿ ನೇರ ಹೂಡಿಕೆ ನಿಯಮಗಳ ಉಲ್ಲಂಘನೆಯ ಸೇರಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಮ್ಮ ವಿರುದ್ಧ ಇಡಿ ಸಲ್ಲಿಸಿದ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿಯ (ಇಸಿಐಆರ್) ನಕಲನ್ನು ಕೋರಿ ದೆಹಲಿ ಹೈಕೋರ್ಟ್‌ಗೆ ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಯಕಸ್ಥ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವೆಬ್‌ಸೈಟ್ ಮತ್ತು ಅದರ ಸಂಸ್ಥಾಪಕರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಇಡಿಗೆ ನಿರ್ದೇಶಿಸಿದೆ.
Web Stories