– ಸಚಿವರ ಕ್ರೇಜ್‍ನಿಂದ ಪಕ್ಷಿಗಳಿಗೆ ಆಪತ್ತು
ಬೆಂಗಳೂರು: ಸಚಿವ ಜಾರ್ಜ್ ಅವರಿಗೆ ಈಗ ಹೊಸ ರೇಸ್ ಕ್ರೇಜ್ ಶುರುವಾಗಿದೆ. ಅದುವೇ ಡ್ರೋಣ್ ರೇಸ್ ಕ್ರೇಜ್. ಇದೇ 29 ರಂದು ಸತತ ಮೂರು ದಿನಗಳ ಕಾಲ ಅರಮನೆ ಮೈದಾನದಂಗಳದಲ್ಲಿ ಡ್ರೋಣ್ ರೇಸ್ ನಡೆಯಲಿದೆ.
ಡಿ.1ರಿಂದ ವಾಣಿಜ್ಯ ಉದ್ದೇಶಕ್ಕೆ ಡ್ರೋಣ್ ಬಳಕೆಗೆ ಕೇಂದ್ರ ಅನುಮತಿ ನೀಡಿದ್ದು, ಇದೇ ಸಂಭ್ರಮದ ಹೆಸರಲ್ಲಿ ಬೆಂಗಳೂರಿನ ಒಪನ್ ಗ್ರೌಂಡ್‍ನಲ್ಲಿ ಡ್ರೋಣ್ ರೇಸ್ ನಡೆಯಲಿದೆ. 3 ದಿನಗಳ ರೇಸ್‍ನಲ್ಲಿ 30 ಡ್ರೋಣ್ ತಯಾರಿಕಾ ಕಂಪನಿಗಳು ಭಾಗಿಯಾಗಲಿವೆ. ಆದ್ರೆ ಸಚಿವ ಕೆ .ಜೆ ಜಾರ್ಜ್ ಅವರ ಡ್ರೋಣ್ ರೇಸ್ ಕುರಿತು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
Advertisement
ಡ್ರೋಣ್ ಹಾರಾಟದಿಂದ ಬೆಂಗಳೂರಿನ ಅಪರೂಪದ ಪಕ್ಷಿಗಳು ಪ್ರಾಣ ಕಳೆದುಕೊಳ್ಳಲಿದೆ. ಅಲ್ಲದೇ ಪಕ್ಷಿಗಳು ಮೈಗ್ರೇಟ್ ಆಗಲಿದೆ. ಹೀಗಾಗಿ ಈ ರೇಸ್ ನಡೆಯಬಾರದು ಅಂತ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ಈ ರೇಸ್‍ಗೆ ತಡೆಯೊಡ್ಡುವಂತೆ ಅರಣ್ಯ ಇಲಾಖೆಗೆ ದೂರು ಕೊಡಲು ಪರಿಸರವಾದಿಗಳು ಮುಂದಾಗಿದ್ದಾರೆ. ತೆರೆದ ಮೈದಾನದಲ್ಲಿ ಈ ರೀತಿ ಮಾಡೋದು ಪಕ್ಷಿ ಸಂಕುಲಕ್ಕೆ ತೊಂದರೆಯಾಗಲಿದೆ. ಅಲ್ಲದೇ ಅರಮನೆ ಮೈದಾನದ ಸುತ್ತಮುತ್ತ ಅಪರೂಪದ ಪಕ್ಷಿಗಳಿವೆ. ಇಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿಕೊಂಡಿರೋದ್ರಿಂದ ಸಮಸ್ಯೆ ಎದುರಾಗಲಿದೆ ಅಂತಾ ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ ಅಂತ ಪರಿಸರವಾದಿ ರಾಜೇಶ್ ತಿಳಿಸಿದ್ದಾರೆ.
Advertisement
Bengaluru to host India’s biggest & most extravagant Night Drone Race at #BlrTechSummit18, which will be held by State govt in collaboration with IDRL. Drone Racers fly their drones at more than 160 km/hr through a live video feed sent from drones directly to the pilot’s goggles. pic.twitter.com/SWj0Naxgc2
— KJ George (@thekjgeorge) November 21, 2018
An exclusive zone within the #BlrTechSummit18 expo, the Global Innovation Zone will showcase emerging technologies & disruptive innovations from the top global startup ecosystems in the world. Register now for more #impact & #innovation. #8daystogo pic.twitter.com/ZM9hh8tbfE
— BengaluruTechSummit (@blrtechsummit) November 21, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv