ಕೇಪ್‍ಟೌನ್: ಸಾಮನ್ಯವಾಗಿ ನವದಂಪತಿ ತಮ್ಮ ಫೋಟೋಗಳು ಸುಂದರವಾಗಿ ಬರಬೇಕೆಂದು ಇಷ್ಟಪಡ್ತಾರೆ. ಮದುವೆಯ ನಂತರ ಸುಂದರ ಸ್ಥಳಗಳಿಗೆ ತೆರಳುವ ದಂಪತಿ ಫೋಟೋಗಳನ್ನು ವಿವಿಧ ಭಂಗಿಗಳಲ್ಲಿ, ಸುಂದರವಾದ ಸ್ಥಳಗಳಲ್ಲಿ ತೆಗೆದುಕೊಳ್ಳಲು ಇಚ್ಚಿಸುತ್ತಾರೆ. ಅದೇ ರೀತಿ ನವಜೋಡಿಯೊಂದು ಸಮುದ್ರ ದಂಡೆಯಲ್ಲಿನ ಕಲ್ಲುಗಳ ಮೇಲೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ನವ ವಧು ತನ್ನ ಕಾಲನ್ನೇ ಮುರಿದುಕೊಂಡಿದ್ದಾಳೆ.
ಮರೆಲಿಜ್ (35) ಕಾಲು ಮುರಿದುಕೊಂಡ ನವವಧು. ಮರೆಲಿಜ್ ತನ್ನ ಪತಿ ರಿಯಾನ್ ಡ್ರೆಯರ್ ಜೊತೆ ಫೋಟೋ ತೆಗೆದುಕೊಳ್ಳುವಕ್ಕಾಗಿ ಹರ್ಮ್ಯಾನಸ್ ಬೀಚ್‍ನ ಸಮುದ್ರ ದಂಡೆಯಲ್ಲಿರುವ ಕಲ್ಲುಗಳ ಮೇಲೆ ಕುಳಿತಿದ್ದರು. ಇನ್ನೇನು ಫೋಟೋಗಾಗಿ ಮುಂದೆ ಪೋಸು ನೀಡುವಾಗ ಹಿಂದಿನಿಂದ ಬಂದ ದೊಡ್ಡ ಅಲೆ ಇಬ್ಬರನ್ನು ಕೆಳಗೆ ಬೀಳಿಸಿದೆ. ಅಲೆಯ ಹೊಡೆತದಿಂದ ಜಾರಿಬಿದ್ದ ಮರೆಲಿಜ್ ಎರಡು ಕಲ್ಲುಗಳ ಮಧ್ಯೆ ಸಿಲುಕಿಕೊಂಡಿದ್ದರಿಂದ ಮೊಳಕಾಲಿನ ಮೂಳೆ ಮುರಿತಕ್ಕೊಳಗಾಗಿದೆ.
Advertisement
Advertisement
ಅಲೆಗಳು ಹಿಂದೆ ಸರಿದಾಗ ಮೆರಿಲಿಜ್ ಎಡಗಾಲು ಕಲ್ಲುಗಳ ಮಧ್ಯೆ ಸಿಲುಕಿರುವುದು ಕೂಡಲೇ ರಿಯಾನ್ ಕೂಗಿಕೊಂಡಿದ್ದಾರೆ. ಸ್ಥಳದಲ್ಲಿ ಫೋಟೋ ತೆಗೆಯುತ್ತಿದ್ದ ಮೆರೆಲಿಜ್ ಸಹೋದರಿ ಜೊತೆ ಸೇರಿಕೊಂಡು ರಿಯಾನ್ ತನ್ನ ಪತ್ನಿಯನ್ನು ರಕ್ಷಿಸಿದ್ದಾರೆ. ಫಿಸಿಯೋಥೆರಪಿ ಆಗಿರುವ ಮೆರೆಲಿಜ್ ನೋವಿನಲ್ಲಿದ್ದರೂ ತನ್ನ ಕಾಲಿನ ಮೂಳೆ ಮುರಿತವಾಗಿರುವುದು ಗೊತ್ತಾಗಿದೆ. ಕೂಡಲೇ ತನ್ನ ಕಾಲಿಗೆ ಆಧಾರ ಮಾಡಿಕೊಳ್ಳಲು ಎರಡು ಫ್ಲಿಪ್ ಫ್ಲಾಪ್ ಮಾಡಿಸಿಕೊಂಡಿದ್ದಾರೆ.
Advertisement
ನಾವಿಬ್ಬರು ಫೋಟೋಗಾಗಿ ಸಮುದ್ರ ದಂಡೆಯಲ್ಲಿರುವ ಕಲ್ಲುಗಳ ಮೇಲೆ ಕುಳಿತುಕೊಳ್ಳಲು ಹೋದೆವು. ಅಲೆಗಳು ನಮ್ಮ ಸಮೀಪ ಬಂದಾಗ ಫೋಟೋ ಚೆನ್ನಾಗಿ ಬರುತ್ತದೆ ಎಂದು ಅಲ್ಲಿಯೇ ಕೂರುವಷ್ಟರಲ್ಲಿ ಒಂದು ಅಲೆ ಬಂದು ಹೋಯಿತು. ಹಿಂದೆ ಮತ್ತೊಂದು ಅಲೆ ಬರುತ್ತಿದ್ದನ್ನು ಕಂಡ ನಾವು ಕ್ಯಾಮೆರಾದತ್ತ ಮುಖ ಮಾಡಿದೆವು. ಆದ್ರೆ ನಾವಿಬ್ಬರೂ ಸರಿಯಾದ ಸ್ಥಳದಲ್ಲಿ ಕುಳಿತಿರಲಿಲ್ಲ ಎಂದು ರಿಯಾನ್ ಡ್ರೆಯರ್ ತಿಳಿಸಿದ್ದಾರೆ.
Advertisement
ಕ್ಯಾಮೆರಾ ಅತ್ತ ನೋಡುತ್ತಿದ್ದಂತೆ ಹಿಂದಿನಿಂದ ಬಂದ ಅಲೆಯಲ್ಲಿ ನಾವಿಬ್ಬರು ಮುಳುಗಿದೆವು. ಅಲೆಯ ಹೊಡೆತಕ್ಕೆ ನಾವಿಬ್ಬರೂ ಜಾರಿ ಕೆಳಗೆ ಬಂದೆವು, ನನ್ನ ಕಾಲಿಗೆ ಸಣ್ಣ ಗಾಯಗಳಾದ್ರೆ, ಪತ್ನಿಯ ಎಡಗಾಲು ಎರಡು ಕಲ್ಲುಗಳ ಮಧ್ಯೆಯೇ ಸಿಲುಕಿಕೊಂಡಿತ್ತು. ಕೂಡಲೇ ಆಕೆಯನ್ನು ಮೇಲೆಕ್ಕೆತ್ತಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು ಅಂತಾ ರಿಯಾನ್ ಹೇಳಿದ್ದಾರೆ.