ಬೆಂಗಳೂರು: ಮದುವೆ ಅನ್ನೋದು ಒಂದು ಮಧುರ ಅನುಬಂಧ. ಅಲ್ಲದೆ ಇದು ಜೀವನದ ಒಂದು ಮುಖ್ಯವಾದ ಘಟ್ಟವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ನೆಪದಲ್ಲಿ ಹಲವು ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತವೆ. ಅಂತೆಯೇ ಸಿಲಿಕಾನ್ ಸಿಟಿಯಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಪತಿಗೆ ತಾನು ಎರಡನೇ ಪತ್ನಿ ಎಂದು ಗೊತ್ತಾಗಿ ನವವಧು ನೇಣಿಗೆ ಕೊರಳೊಡ್ಡಿದ್ದಾಳೆ.
ಈ ಘಟನೆ ಬೆಂಗಳೂರಿನ ಮಾತರಹಳ್ಳಿಯ ಕಾವೇರಿ ಲೇಔಟ್ (Kaveri Layout) ನಲ್ಲಿ ನಡೆದಿದೆ. ನವಧುವನ್ನು ಗೌತಮಿ (24) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ 4 ಗಂಟೆಯ ಒಳಗಡೆ ಗೌತಮಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಢನಿದ್ರೆಯಲ್ಲಿದ್ದ ಪತಿ ಪ್ರಸಾದ್ ರೆಡ್ಡಿ ಬೆಳಗ್ಗಿನ ಜಾವ ಕಣ್ಣು ಬಿಟ್ಟಾಗ ಗೌತಮಿ ಫ್ಯಾನಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.
ಘಟನೆ ಸಂಬಂಧ ಗೌತಮಿ ತಂದೆ ಬಾನು ನೀಡಿದ ದೂರಿನನ್ವಯ ಮಾರತಹಳ್ಳಿ ಪೊಲೀಸರು (Marathahalli Police Station) ಪತಿ ಪ್ರಸಾದ್ ಹಾಗೂ ಆತನ ಮೊದಲ ಪತ್ನಿ ಆಯಿಷಾ ಬಾನು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌತಮಿ ಬಿಕಾಂ (Bcom) ಓದಿದ್ದು, ಆಂಧ್ರಪ್ರದೇಶ (Andhrapradesh) ದ ಪುಂಗನೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಳು. ಈ ಸಂದರ್ಭದಲ್ಲಿ ಈಕೆಗೆ ಪ್ರಸಾದ್ ಮೇಲೆ ಲವ್ (Love) ಆಗಿದೆ. ಪರಿಣಾಮ ಆಕೆ ಅವನ ಜೊತೆ ಓಡಿ ಹೋಗಿದ್ದಾಳೆ. ಬಳಿಕ 2022ರ ಮಾರ್ಚ್ 19ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ (Gouthami- Prasad Reddy)Marriage) ಕಾಲಿಟ್ಟಿದ್ದಾರೆ.
ಇತ್ತ ಮಗಳು ಓಡಿ ಹೋದ ಸಂದರ್ಭದಲ್ಲಿ ಮಗಳು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಆದರೆ ಆಕೆ ಪೊಲೀಸರ ಮುಂದೆ ಹಾಜರಾಗಿ ತಾನು ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಳು. ನಂತರ ದಂಪತಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ- ಹಿಂದೂ ಯುವಕನ ಜೊತೆಗಿದ್ದ ಅನ್ಯಧರ್ಮದ ಯುವತಿ ಮೇಲೆ ಹಲ್ಲೆ
ಪ್ರಸಾದ್ ಹಾಗೂ ಬಾನುಗೆ ಈಗಾಗಲೇ ಓರ್ವ ಮಗಳಿರುವುದಾಗಿ ಗೌತಮಿಗೆ ಗೊತ್ತಾಗಿದೆ. ಮಂಗಳವಾರ ತಂದೆ ಬಾಬುಗೆ ಕರೆ ಮಾಡಿದ ಗೌತಮಿ, ಬಾನು ಮನೆಗೆ ಬಂದಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ತಾನು ಬಾನು ಯಾಕೆ ಮನೆಗೆ ಬರುವುದು ಎಂದು ಪ್ರಶ್ನೆ ಮಾಡಿದೆ. ಈ ವೇಳೆ ಇಬ್ಬರೂ ಸೇರಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕಿರುಕುಳ ನೀಡಿದ್ದಾರೆ ಎಂದು ಗೌತಮಿ ಹೇಳಿಕೊಂಡಿರುವುದಾಗಿ ಬಾಬು ಪೊಲೀಸರಿಗೆ ತಿಳಿಸಿದ್ದಾರೆ.