ನೆಲಮಂಗಲ: ತಂಗಿಯ ಬರ್ತಡೇ ಪಾರ್ಟಿಗೆ ಕರೆದುಕೊಂಡು ಹೋಗದ್ದಕ್ಕೆ ನೊಂದು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ಶ್ಯಾಮಭಟ್ಟರಪಾಳ್ಯದಲ್ಲಿ ನಡೆದಿದೆ.
ತಿಪಟೂರು ಮೂಲದ ಐಶ್ವರ್ಯ(22) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ 6 ತಿಂಗಳ ಹಿಂದೆಯಷ್ಟೇ ಲಕ್ಷ್ಮಿನಾರಾಯಣ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾಗಿ ತಿಳಿದುಬಂದಿದೆ.ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ – ವಿ. ಸೋಮಣ್ಣ
ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಲಿಂಗ್ ಹುಕ್‌ಗೆ ಹಗ್ಗದ ಮೂಲಕ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ತಂಗಿಯ ಬರ್ತ್‌ಡೇ ಪಾರ್ಟಿಗೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಮಾದನಾಯಕನಹಳ್ಳಿ (Madanayakanahalli) ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ.ಇದನ್ನೂ ಓದಿ: UG NEET: ಸ್ಟ್ರೇ ವೇಕೆನ್ಸಿ ಸುತ್ತಿಗೆ ಆಪ್ಷನ್ ದಾಖಲಿಗೆ ಡಿ.15ರವೆರೆಗೆ ದಿನಾಂಕ ವಿಸ್ತರಣೆ – ಕೆಇಎ

