ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಂಪುರ್ ಹತ್ಯೆನಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ನವ ವಿವಾಹಿತ ದಂಪತಿ ಮೃತಪಟ್ಟಿದ್ದಾರೆ.
ಲಿಲಿ ಖಾತೂನ್ ಮತ್ತು ಖಾಜಿ ಸಾಜಿದುರ್ ಅವರು ಜನವರಿಯಲ್ಲಿ ವಿವಾಹವಾವಾಗಿದ್ದದರು. ಬಾಗ್ಟುಯಿ ಗ್ರಾಮದಲ್ಲಿರುವ ಲಿಲಿ ಖಾತೂನ್ ಅವರ ತಾಯಿಯ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮಧ್ಯರಾತ್ರಿ ಸಾಜಿದುರ್ ಮತ್ತು ಅವರ ಪತ್ನಿ ಇರುವ ಮನೆಗೆ ಬೀಗ ಹಾಕಿದ್ದಾರೆ. ಇದನ್ನು ಕಂಡು ಗಾಬರಿಯಾದ ಸಾಜಿದುರ್ ತಮ್ಮ ಸ್ನೇಹಿತ ಮಜೀಮ್‍ಗೆ ಕರೆ ಮಾಡಿ ವಿಚಾರವನ್ನು ತಿಳಿಸಿ, ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ
Advertisement
Advertisement
ನಂತರ ಮಾಜೀಮ್ ಸಾಜಿದುರ್ ಅವರ ತಂದೆಗೆ ಕೂಡ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸಾಜಿದುರ್ ಅವರನ್ನು ಸಂಪರ್ಕಿಸಲು ಅವರ ತಂದೆ ಪ್ರಯತ್ನಿಸಿದ್ದಾರೆ. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು. ಮರುದಿನ ಬೆಳಗ್ಗೆ ದಂಪತಿ ದೇಹ ಸುಟ್ಟು ಕರಕಲಾಗಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ
Advertisement
West Bengal | Around 10-12 houses were set on fire last night. A total of 10 dead bodies have been recovered, 7 dead bodies were retrieved from a single house: Fire officials on death of several people after a mob allegedly set houses on fire and killed a TMC leader in Birbhum. pic.twitter.com/KOW2ldlCgy
— ANI (@ANI) March 22, 2022
Advertisement
ಮಂಗಳವಾರ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಮ್‍ಪುರಹತ್ ಗ್ರಾಮದಲ್ಲಿ ಸುಮಾರು 12ಕ್ಕೂ ಹೆಚ್ಚು ಮನೆಗಳಿಗೆ ಕಿಡಿಕೇಡಿಗಳು ಬೆಂಕಿ ಹಚ್ಚಿದ್ದು, ಇಬ್ಬರು ಮಕ್ಕಳು ಸೇರಿದಂತೆ ಸುಮಾರು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಮಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಪಶ್ಚಿಮಬಂಗಾಳ ಸರ್ಕಾರಕ್ಕೆ ವರದಿ ಕೇಳಿದೆ. ಬಂಗಾಳ ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಒತ್ತಾಯಿಸಿದೆ.