ಜೈಪುರ: ಮದುವೆಯಾಗಿ ಪತಿಯ ಮನೆಗೆ ಹೋಗುತ್ತಿದ್ದ ನವವಿವಾಹಿತೆಯನ್ನು ಅಪರಿಚಿತ ದುಷ್ಕರ್ಮಿಗಳು ಕಾರಿನಿಂದಲೇ ಅಪಹರಿಸಿರುವ ಘಟನೆ ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಎಸ್‍ಪಿ ಅಮರ್ ಪಾಲ್ ಸಿಂಗ್ ಕಪೂರ್ ಅವರ ಕಚೇರಿಗೆ ಜನರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ಅವರಿಗೆ ಸಮಾಧಾನ ಮಾಡಿ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.
Advertisement
Advertisement
ಘಟನೆ ವಿವರ:
ನಾಗಾ ಗ್ರಾಮದ ಗಿರಿಧಾರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರಿಬ್ಬರಿಗೂ ಒಂದೇ ದಿನ ಮದುವೆ ನಿಶ್ಚಯ ಮಾಡಿದ್ದರು. ಅದರಂತೆಯೇ ಮದುವೆ ಮಾಡಿ ಅವರನ್ನು ತಮ್ಮ ಅತ್ತೆ ಮನೆಗೆ ಪತಿಯ ಕಾರಿನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಅವರು ಪತಿಯ ಮನೆಗೆ ಹೋಗುವ ಮೊದಲೇ ಮಾರ್ಗ ಮಧ್ಯೆ ಎರಡು ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರಿನ ಸುತ್ತ ಸುತ್ತುವರಿದಿದ್ದು, ರಾಡ್‍ನಿಂದ ದಾಳಿ ಮಾಡಿದ್ದಾರೆ. ಮೊದಲು ಅವರು ದರೋಡೆಕೋರರು ಎಂದು ತಿಳಿದ ಭಯದಿಂದ ಕಾರಿನ ಬಾಗಿಲು ತೆರೆಯಲಿಲ್ಲ. ಆದರೆ ದುಷ್ಕರ್ಮಿಗಳು ಶಸ್ತ್ರಾಸ್ತಗಳನ್ನು ತೋರಿಸಿ ನವವಿವಾಹಿತೆಯರನ್ನು ಬೆದರಿಸಿ ಬಲವಂತವಾಗಿ ಕಾರಿನ ಬಾಗಿಲು ತೆಗೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ದುಷ್ಕರ್ಮಿಗಳು ಇಬ್ಬರಲ್ಲಿ ಓರ್ವ ನವ ವಿವಾಹಿತೆಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಇಬ್ಬರು ವರರಿಗೆ ಮತ್ತು ಮತ್ತೊಬ್ಬ ಸಹೋದರಿಗೆ ಗಾಯವಾಗಿದೆ. ತಕ್ಷಣ ಸಹೋದರಿ ಪೋಷಕರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಪೋಷಕರಿಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಬಿಎಸ್‍ಪಿ ಮುಖಂಡ ರಾಜೇಂದ್ರ ಗುದಾ ಅವರ ಸಹಾಯ ಪಡೆದು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
Advertisement
ಈ ಘಟನೆ ರಾಜಕೀಯ ಪ್ರೇರಿತವಾಗಿದ್ದು, ನಮ್ಮ ಸಮುದಾಯದ ಹುಡುಗಿಯನ್ನು ಅಪಹರಣ ಮಾಡಿದವರನ್ನು ಕೂಡಲೇ ಬಂಧಿಸಿ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ವಿವಾಹಿತೆ ಸುರಕ್ಷಿತವಾಗಿ ಮನೆಗೆ ಹಿಂದಿರುಗಿ ಬಂದಿಲ್ಲ ಎಂದರೆ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಾಜೇಂದ್ರ ಗುದಾ ಬೆದರಿಕೆ ಕೂಡ ಹಾಕಿದ್ದಾರೆ.
ಅಷ್ಟೇ ಅಲ್ಲದೇ ನಮ್ಮ ಸಮುದಾಯದ ಹುಡುಗಿಯನ್ನು ಕಿಡ್ನಾಪ್ ಮಾಡಲಾಗಿದೆ. ಆಕೆಗೆ ಯಾವುದೇ ತೊಂದರೆ ಆಗದೇ ಕ್ಷೇಮವಾಗಿ ವಾಪಸ್ ಬರಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆ ಮತದಾನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರಾಜೇಂದ್ರ ಗುದಾ ಹೇಳಿದ್ದಾರೆ.
ಸದ್ಯಕ್ಕೆ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈ ಘಟನೆ ಸಂಬಂಧಿಸಿದಂತೆ ಅನುಮಾನದ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಆದರೆ ಇದುವರೆಗೂ ನವವಿವಾಹಿತೆ ಪತ್ತೆಯಾಗಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.