– ರೇವಾ ವಿಶ್ವವಿದ್ಯಾನಿಲಯದಲ್ಲಿ ಕುವೆಂಪು ಸಭಾಂಗಣ ಲೋಕಾರ್ಪಣೆ
ಬೆಂಗಳೂರು: ಸಮಾಜವನ್ನು ಮೆಚ್ಚಿಸುವ ಕೆಲಸ ಮಾಡುವುದಕ್ಕಿಂತ, ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು ಇಂದಿನ ಅವಶ್ಯವಾಗಿದೆ. ನಮ್ಮ ನಂತರವೂ ನಾವು ಬದುಕಲು ಬಯಸಿದರೆ, ಅದು, ನಾವು ಸಮಾಜಕ್ಕೇನು ಕೊಡುಗೆ ನೀಡಿದ್ದೇವೆ ಎನ್ನುವುದನ್ನು ಅವಲಂಬಿಸಿರುತ್ತದೆ ಎಂದು ವಿಧಾನಸಭಾ ಸಭಾಪತಿ ಕೆ.ಆರ್. ರಮೇಶ್‍ಕುಮಾರ್ ಮಾರ್ಮಿಕವಾಗಿ ನುಡಿದರು.
Advertisement
ರೇವಾ ವಿಶ್ವವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುವೆಂಪು ಸಭಾಂಗಣ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬುದ್ಧ, ಅಶೋಕ, ಕಾರ್ಲ್ ಮಾರ್ಕ್ಸ್, ನೆಲ್ಸನ್‍ಮಂಡೆಲಾ, ಮಹಾತ್ಮ ಗಾಂಧಿ, ಅಬ್ದುಲ್ ಕಲಾಂ, ಬೋಸ್. ಮುಂತಾದವರು ಕೇವಲ ಒಂದು ಸಮುದಾಯ, ಪ್ರದೇಶ, ದೇಶಕ್ಕೆ ಸೀಮಿತರಾದವರಲ್ಲ. ಇವರೆಲ್ಲ ವಿಶ್ವಚೇತನಗಳು, ಇವರು ಸಮಾಜಕ್ಕಾಗಿ ಸ್ವಾರ್ಥವನ್ನು ತ್ಯಜಿಸಿದ್ದಾರೆ. ಆದ್ದರಿಂದಲೇ ಇಂದಿಗೂ ಅವರು ಜೀವಂತವಾಗಿದ್ದಾರೆ ಎಂದರು.
Advertisement
We are glad to have Shri. K.R. Ramesh Kumar, Hon’ble Speaker of the Karnataka Legislative Assembly speaking to the enthusiastic audience. #REVAUniversity #Auditorium #Inauguration #ActivitiesAtREVA #InauguralCeremony #LifeAtREVA pic.twitter.com/9InqBxYMWT
— REVA University (@REVAUniversity) July 14, 2018
Advertisement
ದುರದೃಷ್ಟವಶಾತ್ ಇಂದು ಜನರು ಚಲಚಿತ್ರ ನಟರ ಬಗ್ಗೆ ತಿಳಿದುಕೊಂಡ ಈ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡಿಲ್ಲ ಎಂದು ಹಾಸ್ಯ ಮಿಶ್ರಿತ ಖೇದ ವ್ಯಕ್ತಪಡಿಸಿದರು. ಇತ್ತೀಚೆಗೆ ನಮ್ಮಲ್ಲಿ ಬದಲಾಗುತ್ತಿರುವ ನಡತೆಗಳಿಂದಾಗಿ ನಮ್ಮ ಸಾಂಸ್ಕೃತಿಕ ಮೌಲ್ಯಗಳು ನಾಶವಾಗುತ್ತಿವೆ. ಯಾವುದೇ ಕಾರಣಕ್ಕೂ ಸಾಂಸ್ಕೃತಿಕ ಮೌಲ್ಯಗಳು ಮಾತ್ರ ನಾಶವಾಗಬಾರದು. ನಾವು ಹಿಂದೆ ಹೇಗಿದ್ದೆವು, ನಮ್ಮ ಸುತ್ತಮುತ್ತಲಿನವರೊಂದಿಗೆ ನಮ್ಮ ವರ್ತನೆ ಹೇಗಿದೆ ಎನ್ನುವುದನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ ಎಂದ ಅವರು ಸಾಂಸ್ಕೃತಿಕ ಮೌಲ್ಯಗಳು ಒಬ್ಬ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯುತ್ತವೆ ಎನ್ನುವುದಕ್ಕೆ ನಿದರ್ಶನವಾಗಿ ಡಾ. ಶ್ಯಾಮರಾಜು ನಿಲ್ಲುತ್ತಾರೆ ಎಂದು ಹೇಳಿದರು.
Advertisement
ಕುವೆಂಪು ಸಭಾಂಗಣ ಕುರಿತು ಮಾತನಾಡಿದ ಅವರು, ಕುವೆಂಪು ಅವರ ಹೆಸರಿನಿಂದ ಲೋಕಾರ್ಪಣೆಗೊಂಡ ಈ ಸಭಾಂಗಣ ಸಾಂಸ್ಕೃತಿಕ ಮೌಲ್ಯಗಳು ಮತ್ತು ಆಧುನಿಕ ಸಾಧನಗಳ ಸಂಯೋಜನೆ. ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒಳಗೊಂಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಸಂಕಿರಣಗಳನ್ನು ನಡೆಸುವುದಕ್ಕೆ ಸೂಕ್ತವಾಗಿದೆ ಎಂದರು.
Sri. M. Krishna Reddy, Hon'ble Deputy Speaker of the Karnataka Legislative Assembly addressing the students, faculty and staff members of REVA University. #REVAUniversity #Auditorium #Inauguration #ActivitiesAtREVA #InauguralCeremony #Felicitation #LifeAtREVA pic.twitter.com/WqCS8zo7IQ
— REVA University (@REVAUniversity) July 14, 2018
ರೇವಾ ವಿಶ್ವವಿದ್ಯಾನಿಲಯವು ಸಮಾಜ ಸೇವೆಯ ಆಧಾರದ ಮೇಲೆ ಮಾನವೀಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ನೀಡುತ್ತಿರುವುದು ಸಂತೋಷ ವಿಷಯ. ಮುಂದಿನ ದಿನಗಳಲ್ಲಿ ರೇವಾ ವಿವಿ ಈ ಸಮಾಜಕ್ಕೆ ಕುವೆಂಪು, ಕಲಾಂರಂಥ ಅನೇಕ ಮಹನೀಯರ ಕೊಡುಗೆ ನೀಡಲಿ ಎಂದು ಹಾರೈಸಿದರು.
ಉಪ ಸಭಾಪತಿ ಎಂ. ಕೃಷ್ಣಾ ರೆಡ್ಡಿ ಮಾತನಾಡಿ, ಒಬ್ಬ ವ್ಯಕ್ತಿಯ ಆಯುಷ್ಯದಲ್ಲಿ ದಲ್ಲಿ 25 ವರ್ಷ ಕಲಿಕೆಗೆ ಮೀಸಲಾಗಿರುತ್ತವೆ. ಈ ಅವಧಿಯಲ್ಲಿ ಏನನ್ನು ಕಲಿತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ ಮುಂದಿನ 75 ವರ್ಷಗಳು ಸಾಗುತ್ತವೆ. ಬೋಧಕರ ಕೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯವಿರುವುದರಿಂದ ಅವರು, ದೇಶಪ್ರೇಮ, ಮಾನವೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದ ಅವರು, ಕುವೆಂಪು ಅವರು ಒಂದು ವಿಶ್ವವಿದ್ಯಾನಿಲಯಕ್ಕೆ ಸಮವಾಗಿದ್ದಾರೆ. ಅವರ ಹೆಸರಿನಲ್ಲಿ ಸಭಾಂಗಣ ನಿರ್ಮಿಸಿರುವುದು ರೇವಾ ವಿವಿಯು ಮಾನವೀಯ ಮೌಲ್ಯಗಳಿಗೆ ನೀಡುವ ಮಹತ್ವದ ಸೂಚಕವಾಗಿದೆ ಎಂದು ಹೊಗಳಿದರು.
ರೇವಾ ವಿವಿ ಕುಲಪತಿ ಡಾ. ಪಿ. ಶ್ಯಾಮರಾಜು ಮಾತನಾಡಿ, ರೇವಾ ವಿವಿಯ ಘನತೆ ಹೆಚ್ಚುತ್ತಿದೆ. ಇದಕ್ಕೆಲ್ಲ ನಿಮ್ಮ ಪರಿಶ್ರಮ ಕಾರಣವಾಗಿದೆ. ಜೊತೆಗೆ ಇದನ್ನು ಕಾಪಾಡಿಕೊಂಡುವ ಹೋಗುವ ಹೊಣೆಯು ನಿಮ್ಮ ಮೇಲಿದೆ ಎಂದು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ರೇವಾ ವಿವಿಯ ವಿಶ್ರಾಂತ ಕುಲಪತಿ ಡಾ. ವಿ.ಜಿ. ತಳವಾರ್, ರಿಜಿಸ್ಟ್ರಾರ್ ಡಾ. ಎಂ. ಧನಂಜಯ, ಡಾ. ಎನ್. ರಮೇಶ್, ಡಾ. ಬೀನಾ ಜಿ, ಡಾ. ಶುಭಾ ಎ. ವೇದಿಕೆ ಮೇಲಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ರೇವಾ ವಿವಿಯ ಪ್ರದರ್ಶನ ಕಲಾ ವಿಭಾಗದ ಮಾಯಾ ಮತ್ತು ಮುದ್ರಾ ಅವರಿಂದ ಕತಕ್, ಸ್ವಾತಿ ತಿರುನಾಳ ಸಂಗಡಿಗರಿಂದ ಮೋಹಿನಿ ಆಟ್ಟಂ ಮತ್ತು ಭರತನಾಟ್ಯದಲ್ಲಿ ಅರ್ಧನಾರೀಶ್ವರ ರೂಪಕವನ್ನು ಪ್ರದರ್ಶಿಸಲಾಯಿತು.