ಚಿಕ್ಕಬಳ್ಳಾಪುರ: ಕುಟುಂಬದವರ ವಿರೋಧದ ನಡುವೆಯೂ ತನಗಿಂತ ಎರಡು ವರ್ಷ ಕಿರಿಯವನನ್ನ ಪ್ರೀತಿಸಿ ಮದುವೆಯಾಗಿದ್ದ (Marriage) ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.
ಶಿಡ್ಲಘಟ್ಟ ನಗರದ (Sidlaghatta City) ಮಯೂರ ವೃತ್ತದ ಬಳಿ ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ವಿವಾಹಿತೆ ನಾಗಮಣಿ (23) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬಿಜೆಪಿಗರು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯವೇಕೆ? – ಡಿಕೆಶಿ ಪ್ರಶ್ನೆ
Advertisement
Advertisement
ಖಾಸಗಿ ಕ್ಲಿನಿಕ್ ಒಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಜಾತವಾರಹೊಸಹಳ್ಳಿ ಗ್ರಾಮದ ನಾಗಮಣಿ, ಕಳೆದ ಒಂದೂವರೆ ವರ್ಷದ ಹಿಂದೆ ತಾತಹಳ್ಳಿ ಗ್ರಾಮದ ಪವನ್ (21) ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪವನ್ ಕುಟುಂಬದವರು ಯುವತಿ ಬೇರೆ ಸಮುದಾಯ ಎಂಬ ಕಾರಣಕ್ಕೆ ಮನೆಗೆ ಸೇರಿಸಿರಲಿಲ್ಲ. ಹೀಗಾಗಿ ಇಬ್ಬರು ಶಿಡ್ಲಘಟ್ಟ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು, ಇಂದು ಮಹಿಳೆ ನೇಣಿಗೆ ಶರಣಾಗಿದ್ದಾಳೆ.
Advertisement
Advertisement
ಶಿಡ್ಲಘಟ್ಟ ಪೊಲೀಸರು ಮೃತದೇಹವನ್ನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಆದ್ರೆ ಯುವತಿ ಹಾಗೂ ಯುವಕನ ಕಡೆಯವರು ರಾಜೀ ಪಂಚಾಯತಿಗೆ ಮಾತುಕತೆ ನಡೆಸಿದ್ದಾರೆ. ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಲಕ್ಷ್ಮಿ ಹೆಬ್ಬಾಳ್ಕರ್