ಲಕ್ನೋ: ಮದುವೆ ಮುಗಿಸಿ ವರನ ಮನೆಗೆ ತೆರಳುತ್ತಿದ್ದ ವೇಳೆ ಕಾರು ಆಟೋ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತ ಜೋಡಿ ಸೇರಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ನಲ್ಲಿ (Bijnor) ನಡೆದಿದೆ.
ಶನಿವಾರ ಮುಂಜಾನೆ ಘಟನೆ ನಡೆದಿದೆ. ದಟ್ಟ ಮಂಜು ಕವಿದಿದ್ದ ಕಾರಣ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಶುಕ್ರವಾರ ಸಂಜೆಯಷ್ಟೇ ಮದುವೆಯಾಗಿದ್ದ ನವಜೋಡಿ ಬಿಜ್ನೋರ್ನ ಧಂಪುರದಲ್ಲಿರುವ ವರನ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಬೆಳಗಾವಿ| ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ
Advertisement
ಘಟನೆ ನಡೆದ ಸಂದರ್ಭ ಕಾರಿನಲ್ಲಿ ನವದಂಪತಿ ಸೇರಿದಂತೆ ಇತರೆ ಸಂಬಂಧಿಕರು ಪ್ರಯಾಣಿಸುತ್ತಿದ್ದರು. ಅಪಘಾತದ ಪರಿಣಾಮ ನವಜೋಡಿ ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ದಟ್ಟ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ತುಂಗಾರತಿ ಸಂಭ್ರಮ – ರಾಯರ ಮಠದಲ್ಲಿ ಕಳೆಕಟ್ಟಿದ ಬೆಳಕಿನ ಹಬ್ಬ
Advertisement
Advertisement
ಘಟನೆಯಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾಥಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನನ್ನ ತೆರಿಗೆ ನನ್ನ ಹಕ್ಕು – ಡಿಕೆಶಿ ವಿರುದ್ಧ ಸಿಡಿದ ಜಯನಗರ ಜನತೆ, ಭಾನುವಾರ ಉಗ್ರ ಹೋರಾಟ
Advertisement