ಸ್ಯಾಂಡಲ್‌ವುಡ್ (Sandalwood) ಸ್ಟಾರ್ ಕಪಲ್ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ (Haripriya) ಇದೀಗ ತಮ್ಮ ಮೊದಲ ಯುಗಾದಿ (Ugadi Festival) ಸಂಭ್ರಮದಲ್ಲಿದ್ದಾರೆ. ಮದುವೆಯಾದ್ಮೇಲೆ ಇದು ಮೊದಲ ಯುಗಾದಿಯಾಗಿದ್ದು, ಅಭಿಮಾನಿಗಳಿಗೆ ಸಿಂಹಪ್ರಿಯಾ ಜೋಡಿ ವಿಶ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಈ ವರ್ಷ ಜನವರಿ 26ರಂದು ಸಿಂಹಪ್ರಿಯಾ (Simhapriya) ಜೋಡಿ ಮೈಸೂರಿನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾಗಿ ಎರಡು ತಿಂಗಳು ಪೂರೈಸಿದೆ. ಇದೀಗ ಖುಷಿ ಖುಷಿಯಾಗಿ ತಮ್ಮ ಮೊದಲ ಯುಗಾದಿ ಹಬ್ಬವನ್ನ ಈ ಜೋಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ
View this post on Instagram
ನಟಿ ಹರಿಪ್ರಿಯಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ವಸಿಷ್ಠ ಕಪ್ಪು ಮತ್ತು ಕಂದು ಬಣ್ಣದ ಕುರ್ತಾ ಕಪ್ಪು ಕಲರ್ ಪ್ಯಾಂಟ್ ಧರಿಸಿದ್ದಾರೆ. ಮುದ್ದಾದ ಜೋಡಿ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ನವಜೋಡಿಗೆ ಯುಗಾದಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.
ಇನ್ನೂ ವಸಿಷ್ಠ ಸಿಂಹ- ಹರಿಪ್ರಿಯಾ ನಟಿಸಿರುವ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಇಬ್ಬರು ತೆರೆಯ ಮೇಲೆ ಮೊದಲ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.