ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ನವವಿವಾಹಿತ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಆಸ್ಟಿನ್ ಟೌನ್‍ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಪೇದೆಯನ್ನು ಬಳ್ಳಾರಿ ಮೂಲದ ಗೋವಿಂದ.ಕೆ ಎಂದು ಗುರುತಿಸಲಾಗಿದೆ. ಅವರು ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ನಗರದ ಕ್ವಾಟ್ರಸ್‍ನಲ್ಲಿರುವ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ವಿವೇಕ ನಗರ ಠಾಣೆಯಲ್ಲಿ ಅವರು ಕಾನ್‍ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.
ಇತ್ತೀಚಿಗಷ್ಟೇ ಆಸ್ಟಿನ್ ಟೌನ್ ಕ್ವಾಟ್ರಸ್‍ಗೆ ಗೋವಿಂದ ಅವರು ಬಂದಿದ್ದರು ಎಂದು ತಿಳಿದು ಬಂದಿದೆ.