– ಹೋಳಿ ಹಬ್ಬದಂದೇ ಹರಿದ ರಕ್ತದೋಕುಳಿ
– ವಿಡಿಯೋ ಮಾಡುವಾಗ್ಲೆ ಸಂಭವಿಸಿದ ಅಪಘಾತ
ಲಕ್ನೋ: ಇತ್ತೀಚೆಗೆ ಟಿಕ್‍ಟಾಕ್ ಯುವಪೀಳಿಗೆಗೆ ಮಾರಕವಾಗುತ್ತಿದ್ದು, ಟಿಕ್‍ಟಾಕ್ ವಿಡಿಯೋ ಮಾಡುವ ಹುಚ್ಚಿಗೆ ಬಿದ್ದ ಬಳಕೆದಾರರು ತಮ್ಮ ಜೀವಕ್ಕೆ ಕಂಟಕ ತಂದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗೆ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನವವಿವಾಹಿತನೋರ್ವ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
Advertisement
ಮೃತ ವ್ಯಕ್ತಿಯನ್ನು ಖಿಂಡೀದಿಯಾ ಗ್ರಾಮದ ನಿವಾಸಿ ಕಪಿಲ್(23) ಎಂದು ಗುರುತಿಸಲಾಗಿದೆ. ಬುಧವಾರ ಹೋಳಿ ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮದಿಂದ ಬಣ್ಣದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಟಿಕ್‍ಟಾಕ್ ವಿಡಿಯೋ ಮಾಡಲು ಕಪಿಲ್ ಹಾಗೂ ಆತನ ಸ್ನೇಹಿತರು ಮುಂದಾದರು. ಟಿಕ್‍ಟಾಕ್ ವಿಡಿಯೋಗಾಗಿ ಟ್ರ್ಯಾಕ್ಟರ್ ನಲ್ಲಿ ಸ್ಟಂಟ್ ಮಾಡಿ ಹೆಚ್ಚು ಲೈಕ್ಸ್ ಪಡೆಯಲು ಹೋಗಿ ಕಪಿಲ್ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಸ್ಟಂಟ್ ಮಾಡುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಪಿಲ್ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪತ್ನಿಯ ಟಿಕ್‍ಟಾಕ್ ವಿಚಾರ ಕೇಳಿ ವಿದೇಶದಿಂದ ಓಡಿ ಬಂದ ಪತಿ
Advertisement
Advertisement
ಏಕಾಏಕಿ ವಾಹನ ಪಲ್ಟಿಯಾದ ಪರಿಣಾಮ ಕಪಿಲ್ ದೇಹ ಟ್ರ್ಯಾಕ್ಟರ್ ಅಡಿಕೆ ಸಿಲುಕಿ ಅಪ್ಪಚ್ಚಿಯಾಗಿದೆ. ಕಪಿಲ್ ಮಾಡುತ್ತಿದ್ದ ಸ್ಟಂಟ್‍ಗಳನ್ನು ವಿಡಿಯೋ ಮಾಡುತ್ತಿದ್ದ ಸ್ನೇಹಿತ ಆತನ ಸಹಾಯಕ್ಕೆ ಬರುವ ಮುನ್ನವೇ ಕಪಿಲ್ ಸಾವನ್ನಪ್ಪಿದ್ದನು. ಇದನ್ನೂ ಓದಿ: ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್
Advertisement
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕಪಿಲ್ ಮದುವೆಯಾಗಿತ್ತು. ಹೊಸ ಬಾಳನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಕಪಿಲ್ ಟಿಕ್‍ಟಾಕ್ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಟ್ರ್ಯಾಕ್ಟರ್ ಚಲಾಯಿಸುತ್ತಾ ಅದರ ಮುಂದಿನ ಎರಡು ಟೈರ್ ಗಳನ್ನು ಎತ್ತಿ ಸ್ಟಂಟ್ ಮಾಡಲು ಕಪಿಲ್ ಮುಂದಾದಾಗ ಈ ಅನಾಹುತ ಸಂಭವಿಸಿದೆ.
ಕಪಿಲ್ ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಆತನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪೊಲೀಸರಿಗೆ ಕೇಳಿದರೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್‍ನಿಂದ ಪತಿಯ 2ನೇ ಮದುವೆ ರಹಸ್ಯ ಬಯಲು
ಈ ಹಿಂದೆ ಫೆ. 18ರಂದು ಮೀರತ್‍ನಲ್ಲಿ ಇದೇ ರೀತಿ ಪ್ರಕರಣ ಬೆಳಕಿಗೆ ಬಂದಿತ್ತು. 18 ವರ್ಷದ ಯುವಕನೋರ್ವ ಕಾಲುವೆಯಲ್ಲಿ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನು.