ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ(Husband) ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ(Bengaluru) ಎಂವಿ ಲೇಔಟ್ ಉಲ್ಲಾಳದ ಬಳಿ ನಡೆದಿದೆ.
ಮಹೇಶ್ವರ(24) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆಗಸ್ಟ್ 21 ರಂದು ಮಹೇಶ್ವರ ಮತ್ತು ಕವನ(22) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದ್ವೆಯಾಗಿ ಮೂರು ತಿಂಗಳಿಗೆ ಪತ್ನಿಯಿಂದ(Wife) ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಬಂದಿದೆ. 5 ದಿನ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.
Advertisement
ಮಹೇಶ್ವರನ ತಾಯಿ ರತ್ನಮ್ಮ ನೀಡಿದ ದೂರಿನ ಆಧಾರದಲ್ಲಿ ಜ್ಞಾನಭಾರತಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34(ಏಕೋದ್ದೇಶವನ್ನು ಮುಂದುವರೆಸಲು ಅನೇಕ ವ್ಯಕ್ತಿಗಳೊಂದಿಗೆ ಎಸಗಿದ ಕೃತ್ಯ), 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಕವನ ಮತ್ತು ಆಕೆಯ ಪೋಷಕರಾದ ಆತ್ಮಾನಂದ ಮತ್ತು ಪದ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
Advertisement
ದೂರಿನಲ್ಲಿ ಏನಿದೆ?
ಚನ್ನಪಟ್ಟಣ ತಾಲೂಕಿನ ಕೊಡರು ಗ್ರಾಮದಲ್ಲಿ ನಾನು ನೆಲೆಸಿದ್ದು ಆಗಸ್ಟ್ 21 ರಂದು ಮಗನ ಮದುವೆ ಮದ್ದೂರಿನ ಮದ್ದೂರಮ್ಮ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ. ವಿವಾಹ ಮಾಡಿದ ಕೆಲವೇ ದಿನಗಳ ನಂತರ ಹೊಂದಾಣಿಕ ಮನಸ್ಥಿತಿ ಇಲ್ಲದ ಕವನ ಪದೇ ಪದೇ ಜಗಳ ಮಾಡುತ್ತಿದ್ದಳು. ಇದನ್ನೂ ಓದಿ: ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು
Advertisement
ದುರಹಂಕಾರದಿಂದ ವರ್ತಿಸಿ, ಹಿರಿಯರಿಗೆ ಗೌರವ ನೀಡದೇ ದುಬಾರಿ ಬೆಲೆಯ ವಸ್ತುಗಳು, ಆಭರಣ ನೀಡುವಂತೆ ಪೀಡಿಸುತ್ತಿದ್ದಳು. ಆಭರಣ ನೀಡದೇ ಇದ್ದಾಗ ಮಗನನ್ನು ಹೀಯಾಳಿಸುತ್ತಿದ್ದಳು ಅಷ್ಟೇ ಅಲ್ಲದೇ ಆಕೆಯ ತಂದೆಗೆ ಹಣ ನೀಡುವಂತೆ ಹಠ ಮಾಡುತ್ತಿದ್ದಳು.
ಸುಮಾರು 4-5 ವರ್ಷದಿಂದ ಅವಳ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಮಗನಾದ ಮಹೇಶ್ವರನೇ ಹೊತ್ತಿದ್ದ. ವಿವಾಹದ ನಂತರವು ಎಲ್ಲಾ ಜವಾಬ್ದಾರಿಗಳನ್ನು ಹೊರುವಂತೆ ಹಿಂಸೆ ಕೊಟ್ಟು ಬೇರೆ ಮನೆ ಮಾಡುವಂತೆ ಒತ್ತಾಯಿಸಿದ್ದಳು.
ಒಬ್ಬನೇ ಮಗನ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಬೇರೆ ಮನೆ ಮಾಡಲು ಮತ್ತು ಮನೆಗೆ ಬೇಕಾದ ಸಾಮಾಗ್ರಿಗಳನ್ನು ಕೊಟ್ಟು ಸಂತೋಷವಾಗಿರುವಂತೆ ಹೇಳಿದ್ದೆವು. ಆದರೆ ಆಕೆ ಅಲ್ಲಿಯೂ ತನ್ನ ಹಳೇಯ ವರ್ತನೆ ಮುಂದುವರಿಸಿದ್ದಳು. ಪ್ರತಿನಿತ್ಯ ಆಕೆಯ ಕಿರುಕುಳವನ್ನು ಸಹಿಸದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.