ಜಕಾರ್ತ: ಸಾಮಾನ್ಯವಾಗಿ ಮದುವೆ ಸಮಯದಲ್ಲಿ ಹಾಗೂ ಮದುವೆಯ ನಂತರ ವಧು, ವರನಿಗೆ ಹಿರಿಯರು ಹಲವಾರು ಶಾಸ್ತ್ರಗಳನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಒಂದೊಂದು ಧರ್ಮದಲ್ಲೂ ಹಲವಾರು ವಿಭಿನ್ನ ಸಂಪ್ರದಾಯ, ಆಚಾರ-ವಿಚಾರಗಳಿರುತ್ತದೆ. ಆದರೆ ಇಲ್ಲೊಂದು ದೇಶದಲ್ಲಿ ಹೊಸದಾಗಿ ಮದುವೆಯಾದ ನವ ದಂಪತಿಗಳು 3 ದಿನ ಕಳೆಯುವವರೆಗೂ ಶೌಚಾಲಯಕ್ಕೆ ಹೋಗಬಾರದೆಂದು ತಡೆಯಲಾಗುತ್ತದೆ. ಅಷ್ಟಕ್ಕೂ ಇದರ ಹಿಂದಿನ ಅಸಲಿ ಸತ್ಯ ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ.
Advertisement
ಹೌದು, ಇಂಡೋನೇಷ್ಯಾದ ಡಿಡಾಂಗ್ ಎಂಬ ಸಮುದಾಯದಲ್ಲಿ ಮದುವೆಯಾದ 3 ದಿನದವರೆಗೂ ವಧು, ವರ ಶೌಚಾಲಯಕ್ಕೆ ತೆರಳುವಂತಿಲ್ಲ. ವಿವಾಹ ನಂತರ ಒಂದು ವೇಳೆ ವಧು-ವರರು ಶೌಚಾಲಯಕ್ಕೆ ಹೋದರೆ, ಅವರ ಶುದ್ಧತೆಗೆ ಭಂಗವುಂಟಾಗುತ್ತದೆ ಮತ್ತು ಅವರು ಅಶುದ್ಧರಾಗುತ್ತಾರೆ ಎಂಬ ಭಾವನೆ ಇದೆ. ಹೀಗಾಗಿ ಮದುವೆಯ ಸಮಯದಲ್ಲಿ ಅಥವಾ ನಂತರ ವಧು-ವರರು ಶೌಚಾಲಯಕ್ಕೆ ಹೋಗುವಂತಿಲ್ಲ. ಇದನ್ನೂ ಓದಿ: ಚುನಾವಣೆಯಲ್ಲಿ ಸೋತ – ಎಲೆಕ್ಷನ್‌ನಲ್ಲಿ ಹಂಚಿದ್ದ ಹಣ ಹಿಂದಿರುಗಿಸುವಂತೆ ಜನರನ್ನು ಪೀಡಿಸುತ್ತಿದ್ದವನ ವಿರುದ್ಧ FIR
Advertisement
ಮತ್ತೊಂದೆಡೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಕೊಳಕು ಇರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವಿರುತ್ತದೆ. ಈ ವೇಳೆ ಶೌಚಾಲಯಕ್ಕೆ ಹೋದರೆ ವಧುವರರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಎಂದು 3 ದಿನಗಳವರೆಗೆ ಶೌಚಾಲಯಕ್ಕೆ ಹೋಗಲು ಅವಕಾಶ ನೀಡುವುದಿಲ್ಲ. ಅಲ್ಲದೇ ಮದುವೆ ಸಮಯದಲ್ಲಿ ವಧು-ವರರಿಗೆ ಊಟ-ನೀರನ್ನು ಕೂಡ ನೀಡುವುದು ಬಹಳ ಕಡಿಮೆ, ಕಾರಣ ಇದರಿಂದ ಅವರು ಶೌಚಾಲಯಕ್ಕೆ ಹೋಗುವ ಅವಶ್ಯಕತೆ ಬರದಂತೆ ನೋಡಿಕೊಳ್ಳಲಾಗುತ್ತದೆ.
Advertisement
Advertisement
ಇಂಡೋನೇಷ್ಯಾದಲ್ಲಿ ಬಹಳ ಕಟ್ಟುನಿಟ್ಟಾಗಿ ಆಚರಿಸುವ ಈ ಆಚರಣೆಯನ್ನು ಯಾರಾದರೂ ಒಂದು ವೇಳೆ ಪಾಲನೆ ಮಾಡದೇ ಇದ್ದರೆ, ಇದನ್ನು ಅಪಶಕುನ ಎಂದು ಭಾವಿಸಲಾಗುತ್ತದೆ. ಇದನ್ನೂ ಓದಿ: ಪಶ್ಚಿಮ ಘಟ್ಟ ಕರಡು ಅಧಿಸೂಚನೆಗೆ ಭಾರೀ ವಿರೋಧ – ಜುಲೈ 18ಕ್ಕೆ ಮಲೆನಾಡು ಶಾಸಕರ ಸಭೆ