ಕೊಪ್ಪಳ: ಅಂತು-ಇಂತು ಮದುವೆ ಆಯ್ತು ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ನವ ಜೋಡಿಗೆ ಮೊದಲ ರಾತ್ರಿ ದಿನವೇ ಆಪತ್ತು ಕಾದಿತ್ತು. ನವವಧು ರೂಮ್‍ಗೆ ಹೋಗುವ ಮೊದಲೇ ಕಿರಾತಕರು ಕಿಡ್ನಾಪ್ ಮಾಡಿದ ಪ್ರಕರಣವೊಂದು ಕೊಪ್ಪಳದ ಗಂಗಾವತಿಯಲ್ಲಿ ಬೆಳಕಿಗೆ ಬಂದಿದೆ.
ಕಳೆದ 15 ದಿನದ ಹಿಂದಷ್ಟೇ ಮಲ್ಲನಗೌಡ ಮತ್ತು ಗಾಯಿತ್ರಿ ಮದುವೆ ಆಗಿತ್ತು. ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ 2 ಕುಟುಂಬಗಳ ಒಪ್ಪಂದದಿಂದಾನೆ ಮದುವೆ ನಡೆದಿತ್ತು. ಯುವತಿಯ ತವರು ಮನೆ ಗಂಗಾವತಿ ತಾಲೂಕಿನ ಗುಡುರು ಗ್ರಾಮದಲ್ಲಿ ಹಿರಿಯರು ನಿಶ್ಚಯಿಸಿದಂತೆ ವಧು ತವರು ಮನೆಯಲ್ಲೇ ಮೊದಲ ದಿನದ ಪ್ರಸ್ತಾ ಕಾರ್ಯಕ್ರಮವಿತ್ತು.
Advertisement
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ನವಜೋಡಿಗಳು ಇಂದು ಸೌಖ್ಯದಿಂದ ಇರುತ್ತಿದ್ದರು. ಆದರೆ ಆ ಮೊದಲ ರಾತ್ರಿ ದಿನ ನಡೆದಿದ್ದೆ ಬೇರೆ. ಆ ದಿನದ ಎಲ್ಲಾ ಸಾಂಪ್ರದಾಯಿಕ ಕಾರ್ಯಕ್ರಮಗಳ ನಂತರ ವಧು ಇನ್ನೇನು ವರ ಕಾಯುತ್ತಿದ್ದ ರೋಮ್‍ಗೆ ಹೋಗಬೇಕಿತ್ತು. ಅಷ್ಟರೊಳಗೆ ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಒಂದು ಟೀಂ, ವಧು ಗಾಯಿತ್ರಿಯನ್ನು ಕಿಡ್ನಾಪ್ ಮಾಡಿತ್ತು.
Advertisement
ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು 6 ಜನ ಸಹಚರರು ಸೇರಿ ವಧುವನ್ನು ಕಿಡ್ನಾಪ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಇದನ್ನು ತಡೆಯಲು ಯತ್ನಿಸಿದ್ರೂ ಅದು ಸಾಧ್ಯವಾಗಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದಂತೆಯೇ ಸಮೀಪದ ಕಾರಟಗಿ ಪೊಲೀಸ್ ಠಾಣೆಗೆ ಕಿಡ್ನಾಪ್ ಮಾಡಿದವರ ವಿರುದ್ಧ ದೂರು ನೀಡಲು ಕುಟುಂಬಸ್ಥರು ಹೋಗಿದ್ದಾರೆ. ಆದರೆ ಪೊಲೀಸರು ಮಾತ್ರ ಕಾಟಾಚಾರಕ್ಕೆ ಎಂಬಂತೆ ದೂರು ಸ್ವೀಕರಿಸಿ ತನಿಖೆ ಕೈಗೊಳ್ಳದೆ ಕೂತಿದ್ದಾರೆ.
Advertisement
Advertisement
ಪ್ರಕರಣ ದಾಖಲಾಗಿ ಇಂದಿಗೆ ಮೂರು ದಿನ ಕಳೆದರೂ ದೂರು ನೀಡಿದವರಲ್ಲಿ ಯಾರೊಬ್ಬರನ್ನೂ ಕರೆದು ವಿಚಾರಣೆ ನೆಡಸಿಲ್ಲ. ಅಂದು ನಮ್ಮ ಕಣ್ಣ ಮುಂದೆ ಕಿಡ್ನಾಪ್ ಮಾಡಿದವರು ಇಂದು ನಮ್ಮ ಕಣ್ಣೆದುರಿಗೆ ತಿರುಗಾಡುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ತನಿಖೆ ನೆಡಸುತ್ತಿಲ್ಲ ಎಂದು ದೂರು ನೀಡಿದ ಮಲ್ಲನಗೌಡ ಕುಟುಂಬದವರು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv