ಮನೆಗೆ ನುಗ್ಗಿ ಎಲ್ಲರನ್ನೂ ಮುಗಿಸಿಬಿಡ್ತೇವೆ ಎಂದ ಪೋಷಕರು – ಭಯಭೀತರಾಗಿರುವ ನವಜೋಡಿ

Public TV
2 Min Read
lovers chamarajnagara 1

ಚಾಮರಾಜನಗರ: ಪ್ರೀತಿಸಿ ಓಡಿ ಹೋಗಿ ಮನೆಯವರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು. ಆದರೆ ಹುಡುಗಿಯ ಪೋಷಕರಿಂದ ಈಗ ಈ ವಿವಾಹಿತ ಪ್ರೇಮಿಗಳಿಗೆ ಜೀವ ಬೆದರಿಕೆ ಇದೆ. ಸ್ವಚ್ಚಂದವಾಗಿ ಓಡಾಡಿಕೊಂಡಿರಬೇಕಾದ ಈ ಜೋಡಿ ಹಕ್ಕಿ ಸದಾ ಭಯದಲ್ಲೇ ಅಡ್ಡಾಡುತ್ತಾ ಕಂಗಾಲಾಗಿದೆ. ರಕ್ಷಣೆಗಾಗಿ ಅಲೆದಾಡುತ್ತಿರುವ ಈ ವಿವಾಹಿತ ಪ್ರೇಮಿಗಳು ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

lovers chamarajnagara

ನಡೆದಿದ್ದೇನು?
ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಹುತ್ತೂರು ಗ್ರಾಮದ ಪವಿತ್ರ ಹಾಗೂ ಪಿ.ಜಿ.ಪಾಳ್ಯ ಗ್ರಾಮದ ಪ್ರೇಮ್‍ಕುಮಾರ್ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದು, ಇವರಿಬ್ಬರ ಮದುವೆಗೆ ಪೋಷಕರ ವಿರೋಧವಿತ್ತು. ಹಾಗಾಗಿ ಪವಿತ್ರಾಳ ಪೋಷಕರು ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಲು ನಿರ್ಧರಿಸಿ ಎಂಗೇಜ್‍ಮೆಂಟ್ ಸಹ ಆಗಿತ್ತು. ಇದನ್ನೂ ಓದಿ: ಕೊಡಗಿನಲ್ಲೂ ಹೊತ್ತಿದ ಧರ್ಮದ ಕಿಡಿ – ಮುಸ್ಲಿಂ ವ್ಯಾಪಾರಸ್ಥ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ

lovers chamarajnagara 4

ಸಿನಿಮೀಯ ರೀತಿ ಮದುವೆ
ಬಳಿಕ ಗುಂಡಾಲ್ ಜಲಾಶಯದ ಬಳಿ ಫ್ರೀ ವೆಡ್ಡಿಂಗ್ ಶೂಟ್‍ಗೂ ಕಳುಹಿಸಿದ್ದರು. ಇದೇ ವೇಳೆ ಪವಿತ್ರ ತನ್ನ ಪ್ರೇಮಿ ಪ್ರೇಮ್‍ಕುಮಾರ್‍ಗೆ ಕರೆ ಮಾಡಿ ಸಿನಿಮೀಯ ರೀತಿಯಲ್ಲಿ ಆತನೊಂದಿಗೆ ಓಡಿ ಹೋಗಿ ರಾಮನಗರದಲ್ಲಿ ಮದುವೆಯಾಗಿದ್ದರು. ಇತ್ತ ಪವಿತ್ರಾ ಪೋಷಕರು ತಮ್ಮ ಮಗಳನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಪೆÇಲೀಸರು ವಿವಾಹಿತ ಪ್ರೇಮಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದರು.

lovers chamarajnagara 3

ಮನೆಗೆ ನುಗ್ಗಿ ಎಲ್ಲರನ್ನೂ ಮುಗಿಸಿಬಿಡ್ತೇವೆ
ಈ ವೇಳೆ ತನ್ನನ್ನು ಯಾರು ಬಲವಂತವಾಗಿ ಕರೆದೊಯ್ದಿಲ್ಲ, ಪ್ರೇಮ್‍ಕುಮಾರ್‍ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಆತನ ಜೊತೆಯೇ ಹೋಗುವುದಾಗಿ ಪವಿತ್ರಾ ಹೇಳಿಕೆ ನೀಡಿದ್ದಳು. ಇದಕ್ಕೆ ಈಕೆಯ ಪೋಷಕರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದರು. ಆದರೆ ಇದೀಗ ಪವಿತ್ರಾಳ ಪೋಷಕರು ತಿರುಗಿಬಿದ್ದಿದ್ದು, ಈ ಜೋಡಿ ಹಕ್ಕಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು

lovers chamarajnagara 2

ಅಷ್ಟೇ ಅಲ್ಲ, ನಮ್ಮ ಹುಡುಗಿಯನ್ನು ವಾಪಸ್ ಕಳುಹಿಸಿ, ಇಲ್ಲದಿದ್ದರೆ ಮನೆಗೆ ನುಗ್ಗಿ ಎಲ್ಲರನ್ನೂ ಮುಗಿಸಿಬಿಡುವುದಾಗಿ ಪವಿತ್ರಾಳ ಪೋಷಕರು, ಪ್ರೇಮ್‍ಕುಮಾರ್ ಪೋಷಕರಿಗೆ ಧಮ್ಕಿ ಹಾಕಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿಗೆ ಈಗ ಜೀವಭಯ ಕಾಡತೊಡಗಿದೆ. ಸದಾ ಜೀವಭಯದಲ್ಲೇ ಕಾಲ ಕಳೆಯುತ್ತಿರುವ ಈ ಪ್ರೇಮಿಗಳು ಪ್ರಾಣ ರಕ್ಷಣೆಗೆ ಅಲೆದಾಡುತ್ತಾ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *