ಧಾರಾವಾಡ: ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮದುವೆ ಸಂಭ್ರಮದ ಮಧ್ಯೆಯೂ ಮದುಮಗಳೊಬ್ಬಳು ಬಿಡುವು ಮಾಡಿಕೊಂಡು ಮತಗಟ್ಟೆಗೆ ಬಂದು ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ನಗರದ ಭೋವಿ ಗಲ್ಲಿಯ ನಿವಾಸಿಯಾದ ವಧು ಮೀನಾಜ್ ಸಯ್ಯದ್ ಅವರ ಮದುವೆಯೂ ಇಂದು ಸಲೀಮ್ ಖಾಜಿ ಎಂಬವರ ಜೊತೆ ನೆರವೇರಿದೆ. ಮಾಳಾಪುರದ ಪಠಾಣ್ ಹಾಲ್‍ನಲ್ಲಿ ಈ ಜೋಡಿಯ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಆದ್ರೆ ಮದುಮಗಳು ಮಾತ್ರ ತನ್ನ ಪತಿಯ ಜೊತೆ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.ಇದನ್ನೂ ಓದಿ:87 ವರ್ಷದ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ
Advertisement
Advertisement
ನಗರದ ಬಾಸೆಲ್ ಮಿಷನ್ ಶಾಲೆಯಲ್ಲಿ ಮೀನಾಜ್ ತನ್ನ ಹಕ್ಕನ್ನು ಚಲಾಯಿಸಿ ಭಾರತೀಯ ಪ್ರಜೆಯ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಈ ವೇಳೆ ವಧುವಿಗೆ ವರ ಸಲೀಮ್ ಖಾಜಿ ಅವರು ಸಾಥ್ ನೀಡಿದ್ದು, ಮತಗಟ್ಟೆಯವರೆಗೂ ತನ್ನ ಪತ್ನಿಯೊಡನೆ ಬಂದು ಮತದಾನ ಮಾಡಲು ಸಹಕರಿಸಿದ್ದಾರೆ. ಬಳಿಕ ಆರತಕ್ಷತೆ ಕಾರ್ಯಕ್ರಮಕ್ಕೆ ನವದಂಪತಿ ತೆರಳಿದರು.