ಜೈಪುರ: ಚುನಾವಣಾ ಫಲಿತಾಂಶದಲ್ಲಿ ಗೆದ್ದ ಮರುದಿನವೇ ಬಿಜೆಪಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಬಲ್ಮುಕುಂದ್ ಆಚಾರ್ಯ (Balmukundachary) ಅವರು ಅಧಿಕಾರಿಗಳಿಗೆ ಆದೇಶವೊಂದನ್ನು ಹೊರಡಿಸಿದ್ದಾರೆ.
How your vote to the right man matters
pic.twitter.com/JNiozkjdde
— ExtraSpiceAni (@ShrivastavAni) December 4, 2023
- Advertisement 2-
ರಾಜಧಾನಿ ಜೈಪುರದ ಹವಾಮಹಲ್‍ನಿಂದ ಚುನಾವಣೆಯಲ್ಲಿ (Hawa Mahal Assembly Election) ಗೆಲುವು ಕಾಣುತ್ತಿದ್ದಂತೆಯೇ ನೂತನ ಶಾಸಕರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆ ಪ್ರದೇಶದ ರಸ್ತೆಬದಿಯಲ್ಲಿ ಅನಧಿಕೃತವಾಗಿ ನಾನ್ ವೆಜ್ ಮಾರುವ ಗಾಡಿಗಳನ್ನು, ಅಂಗಡಿಗಳನ್ನು ತೆಗೆದುಹಾಕುವಂತೆ ಆದೇಶಿಸಿದ್ದಾರೆ. ಆಚಾರ್ಯ ಅವರ ಈ ಆದೇಶವು ಮಾಂಸ ಮಾರಾಟಗಾರರಲ್ಲಿ ತಲ್ಲಣ ಮೂಡಿಸಿದೆ.
- Advertisement 3-
- Advertisement 4-
ಹವಾಮಹಲ್‍ನಿಂದ ವಿಧಾನಸಭೆಗೆ ಗೆಲುವು ಸಾಧಿಸಿದ ಬಳಿಕ ಬಲ್ಮುಕುಂದ್ ಆಚಾರ್ಯ ಇಂದು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡರು. ಈ ವೇಳೆ ಅವರ ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿದರು. ಪ್ರವಾಸದ ವೇಳೆ ಮಾಂಸಾಹಾರಿ ಗಾಡಿಗಳ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ಆಡಳಿತಾಧಿಕಾರಿಗಳನ್ನು ಕರೆಸಿ ಸಂಜೆ ವೇಳೆಗೆ ರಸ್ತೆ ಬದಿ ಹಾಕಿರುವ ಅನಧಿಕೃತ ಮಾಂಸಾಹಾರಿ ಗಾಡಿಗಳನ್ನು ತೆಗೆಯುವಂತೆ ಆದೇಶಿಸಿದರು. ಸಂಜೆಯ ವೇಳೆಗೆ ಒಂದೇ ಒಂದು ನಾನ್ ವೆಜ್ ಸ್ಟಾಲ್ ಕೂಡ ಇರಬಾರದು ಎಂದರು. ಅಲ್ಲದೆ ಈ ಸಂಪೂರ್ಣ ಪ್ರಕರಣದ ವರದಿಯನ್ನೂ ಶಾಸಕರು ಕೇಳಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ
ಸದ್ಯ ನೂತನ ಶಾಸಕರ ಆದೇಶದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಬಲ್ಮುಕುಂದ್ ಆಚಾರ್ಯ ಅವರು ಮೊಬೈಲ್‍ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ನಾನ್ ವೆಜ್ ಅನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ ಎಂದು ಅವರು ಆಡಳಿತಾಧಿಕಾರಿಗಳನ್ನು ಕೇಳುತ್ತಿದ್ದಾರೆ. ಅಲ್ಲದೆ ರಸ್ತೆ ಬದಿಯಲ್ಲಿರುವ ನಾನ್ ವೆಜ್ ಮಾರಾಟ ಮಾಡುವ ಗಾಡಿಗಳನ್ನು ತೆಗೆಯುವಂತೆಯೂ ಆದೇಶಿಸಿದ್ದಾರೆ. ಸಂಜೆಯವರೆಗೂ ನಾನ್ ವೆಜ್ ಗಾಡಿಗಳು (Non Veg Vehicle) ರಸ್ತೆಯಲ್ಲಿ ಕಾಣಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಂಜೆ ವರದಿ ತರುತ್ತೇನೆ. ಈಗ ಇದೆಲ್ಲ ಹೇಗೆ ನಡೆಯುತ್ತದೆ ಎಂಬುದು ನಿಮ್ಮ ಜವಾಬ್ದಾರಿಯಾಗಿದೆ ಮತ್ತು ಯಾರು ಉಸ್ತುವಾರಿ ವಹಿಸುತ್ತಾರೆ ಎಂಬುದರ ಬಗ್ಗೆ ವರದಿ ನೀಡುವಂತೆ ನೂತನ ಶಾಸಕರು ಸೂಚನೆ ಕೊಟ್ಟಿದ್ದಾರೆ.
ಈ ವೀಡಿಯೋವನ್ನು ಶೇರ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸರ್ಕಾರ ರಚನೆಗೂ ಮುನ್ನವೇ ಶಾಸಕರು ತಮ್ಮ ಕೆಲಸ ಆರಂಭಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.