ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಸಂಪುಟ ವಿಸ್ತರಣೆಯ ಗೊಂದಲ. ನಾ ಕೊಡೆ.. ನೀ ಬಿಡೆ ಎನ್ನುವ ಹೊಸ ಆಟ. ನಮ್ಮವರು ಸೋತಿದ್ದಾರೆ ಅಂದ್ರೆ, ಅವರು ಸೋತಿಲ್ಲವಾ? ಅಂತಾ ಮಿತ್ರಮಂಡಳಿ ಚದುರಂಗದಾಟ ಶುರು ಮಾಡಿದೆ. ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಬಿಜೆಪಿಯ ತಂತ್ರಕ್ಕೆ ಮಿತ್ರಮಂಡಳಿ ಪ್ರತ್ಯಾಸ್ತ್ರ ಹೂಡಿದೆ.
6 ತಿಂಗಳ ಹಿಂದೆ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ಸೆಳೆದಿತ್ತು ಅನ್ನೋ ಸುದ್ದಿ ದೇಶದಲ್ಲೇ ಸದ್ದು ಮಾಡಿತ್ತು. ಕಾಂಗ್ರೆಸ್, ಜೆಡಿಎಸ್‍ನಿಂದ ಬರೋರಿಗೆ ಮಿನಿಸ್ಟರ್ ಆಫರ್ ಅಂತಾ ಹೇಳಲಾಗ್ತಿತ್ತು. ಆದ್ರೀಗ ಬಿಜೆಪಿಯ ವರಸೆ ಬದಲಾಗಿದ್ದು, ಬಂದವರಿಗೆಲ್ಲಾ ಮಿನಿಸ್ಟರ್ ಇಲ್ಲ ಅಂತಿದ್ದಾರೆ. ಸಹಜವಾಗಿಯೇ ಈ ಮಿನಿಸ್ಟರ್ ಇಲ್ಲ ಅನ್ನೋ ವಿಚಾರ ಮಿತ್ರಮಂಡಳಿ ಸದಸ್ಯರ ಆತಂಕಕ್ಕೆ ಕಾರಣವಾಗಿದೆ. ಮಾತು ಕೊಟ್ಟಂತೆ 17 ಜನರನ್ನ ಕೈಬಿಡಬೇಡಿ ಅನ್ನೋ ಘೋಷಣೆ ಶುರು ಮಾಡಿದ್ದು, ನಿಮ್ಮ ಕ್ಯಾಬಿನೆಟ್‍ನಲ್ಲಿ ಇರುವ ಹಾಲಿ ಸಚಿವರನ್ನ ಕಿತ್ತಾಕಿ ಅನ್ನೋ ಒತ್ತಡ ಹಾಕ್ತಿದ್ದಾರೆ.
Advertisement
Advertisement
ಇನ್ನು ಸೋತಿದ್ದರೂ ಡಿಸಿಎಂ ಆಗಿರುವ ಸವದಿಗೆ ಒಂದು ನ್ಯಾಯ, ನಮ್ಗೆ ಒಂದು ನ್ಯಾಯನಾ? ಅನ್ನೋ ವಾದವನ್ನ ಮುಂದಿರಿಸಿದೆ ಗೆದ್ದ ಶಾಸಕರ ಟೀಂ. ಯಡಿಯೂರಪ್ಪ ಮುಂದೆ ಮುಯ್ಯಿಗೆ ಮುಯ್ಯಿಗೆ ಅಸ್ತ್ರ ಪ್ರಯೋಗ ಮಾಡಿರುವ ಮಿತ್ರಮಂಡಳಿ ನಮ್ಮವರನ್ನ ಸಚಿವರನ್ನಾಗಿ ಮಾಡೋದಕ್ಕೆ ಒಪ್ಪಂದದ ಮಾತನಾಡುತ್ತಾರೆ, ಗೆಲುವು ಕೇಳ್ತಾರೆ. ನಾವು ಪಕ್ಷ ಬಿಟ್ಟು ಬರುವಾಗ ಈ ಕಂಡೀಶನ್‍ಗಳೇ ಇರಲಿಲ್ಲ, ಈಗ ಏಕೆ ಷರತ್ತು ಅಂತಾ ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ.
Advertisement
ಮಿತ್ರಮಂಡಳಿ ಅಸ್ತ್ರಕ್ಕೆ ಯಡಿಯೂರಪ್ಪ ಟೀಂ ಕಕ್ಕಾಬಿಕ್ಕಿಯಾಗಿದ್ದು, ಬಿಜೆಪಿ ಹಾಲಿ ಸಚಿವರು ವಿಲವಿಲ ಎನ್ನತೊಡಗಿದ್ದಾರೆ. ಮಿತ್ರಮಂಡಳಿ ಮಾತನ್ನ ಕೇಳಿ ಹೈಕಮಾಂಡ್ ಮುಂದೆ ಯಡಿಯೂರಪ್ಪ ಪ್ರಸ್ತಾಪ ಮಾಡ್ತಾರೆ, ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿರುವ ಸಚಿವರು ಸೇಫ್ ಆಗ್ತಾರೋ? ಔಟ್ ಆಗ್ತಾರೋ? ಅನ್ನೋ ಕುತೂಹಲವಿದ್ದು, ಮಿತ್ರಮಂಡಳಿ ಶಾಕ್‍ಗೆ ಯಡಿಯೂರಪ್ಪ ಕ್ಯಾಬಿನೆಟ್ ಸಚಿವರು ಫುಲ್ ಢರ್ ಆಗಿದ್ದಾರಂತೆ.