ನವದೆಹಲಿ: ಭಾರತೀಯ ಕ್ರಿಕೆಟ್‍ನ ದಂತೆ ಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಅಭಿಮಾನಿಗಳು ಗೌರವ ಸಲ್ಲಿಸಲು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಾಗೆ ಜೇಡ ಜೀವಿವರ್ಗೀಕರಣ ಶಾಸ್ತ್ರದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿರುವ ಸಂಶೋಧನಾ ವಿಜ್ಞಾನಿಗಳು ಮಾಸ್ಟರ್ ಬ್ಲಾಸ್ಟರ್ ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅತ್ಯಂತ ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಗುಜರಾತ್ ಪರಿಸರ ಶಿಕ್ಷಣ ಮತ್ತು ಸಂಶೋಧನೆ (ಜಿಇಇಆರ್) ಪ್ರತಿಷ್ಠಾನದ ಕಿರಿಯ ಸಂಶೋಧಕ ಧ್ರುವ್ ಪ್ರಜಾಪತಿ ಅವರು ಎರಡು ಹೊಸ ಪ್ರಭೇದದ ಜೇಡಗಳನ್ನು ಕಂಡುಹಿಡಿದ್ದಾರೆ. ಅವುಗಳಲ್ಲಿ ಒಂದಕ್ಕೆ ಸಚಿನ್ ತೆಂಡೂಲ್ಕರ್ ಮತ್ತು ಇನ್ನೊಂದಕ್ಕೆ ಕೇರಳದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂತ ಕುರಿಯೊಕ್ಕೋಸ್ ಎಲಿಯಾಸ್ ಚವರ ಅವರ ಹೆಸರನ್ನು ಇಡಲಾಗಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಧ್ರುವ್ ಪ್ರಜಾಪತಿ ಅವರು, ಒಂದು ಜೇಡಕ್ಕೆ ಮಾರೆಂಗೊ ಸಚಿನ್ ತೆಂಡೂಲ್ಕರ್ ಎಂದು ಹೆಸರಿಸಿದ್ದೇನೆ. ಏಕೆಂದರೆ ಸಚಿನ್ ನನ್ನ ನೆಚ್ಚಿನ ಕ್ರಿಕೆಟಿಗ. ಕೇರಳದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದ ಸಂತ ಕುರಿಯಾಕೋಸ್ ಎಲಿಯಾಸ್ ಚವಾರ ಅವರಿಂದ ಮತ್ತೊಂದು ಹೆಸರು ಸ್ಫೂರ್ತಿ ಪಡೆದಿದೆ ಎಂದು ಹೇಳಿದ್ದಾರೆ.
Advertisement
ಎರಡು ಹೊಸ ಪ್ರಭೇದಗಳು ಏಷ್ಯನ್ ಜಂಪಿಂಗ್ ಜೇಡಗಳ ಇಂಡೊಮರೆಂಗೊ ಮತ್ತು ಮಾರೆಂಗೊ ಜಾತಿಯ ಒಂದು ಭಾಗವಾಗಿದೆ ಎಂದು ಧ್ರುವ ಪ್ರಜಾಪತಿ ತಿಳಿಸಿದ್ದಾರೆ.
Advertisement
ಧ್ರುವ ಅವರ ಅಧ್ಯಯನದ ಆವಿಷ್ಕಾರಗಳು ರಷ್ಯಾದ ಜರ್ನಲ್‍ನ ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿ ‘ಆತ್ರ್ರೋಪೋಡಾ ಸೆಲೆಕ್ಟಾ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿವೆ.