ನವದೆಹಲಿ: ಶುಕ್ರವಾರ ರಾತ್ರಿ ತಾಯ್ನಾಡು ಭಾರತಕ್ಕೆ ವಾಪಸ್ ಆಗಿರೋ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಇಂದು ದೆಹಲಿಯಲ್ಲಿ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಯಲಿದೆ.
ನಿನ್ನೆ ಅಟಾರಿ ಗಡಿಯಿಂದ ಅಮೃತಸರಕ್ಕೆ ತೆರಳಿದ ಧೀರಯೋಧ ಅಭಿನಂದನ್ ಅಲ್ಲಿಂದ ದೆಹಲಿ ತಲುಪಿದ್ದಾರೆ. ಹೀಗಾಗಿ ಇಂದು ಅಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಯಲಿದೆ. ಪ್ಯಾರಾಚೂಟ್‍ನಿಂದ ಜಿಗಿದಿದ್ದ ಕಾರಣ ವಾರದ ಕಾಲ ತಪಾಸಣೆ ಜೊತೆಗೆ ಭಾರತೀಯ ಸೇನೆ ವಿಚಾರಣೆಗೆ ಒಳಪಡಿಸಲಿದೆ ಎನ್ನಲಾಗಿದೆ.
Advertisement
Advertisement
ಅಭಿನಂದನ್ ಎದುರಿಸಬಹುದಾದ ವಿಚಾರಣೆಗಳು..?
ವಾಯುಸೇನೆ ಅಧಿಕಾರಿಗಳು ವಾಯುಸೇನೆಯ ಗುಪ್ತಚರ ಘಟಕಕ್ಕೆ ಕರೆದೊಯ್ಯುತ್ತಾರೆ. ಈ ವೇಳೆ ಫಿಟ್‍ನೆಸ್ ಸೇರಿ, ಸಾಕಷ್ಟು ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ ಇದೆಯೇ ಅಂತ ಸ್ಕ್ಯಾನಿಂಗ್ ಮಾಡ್ತಾರೆ. ಶತ್ರುರಾಷ್ಟ್ರ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ಯಾ ಅಂತ ತಪಾಸಣೆ ನಡೆಸಬಹುದು. ಹೆಚ್ಚಿನ ತನಿಖೆಗಾಗಿ ಗುಪ್ತಚರ ಇಲಾಖೆಗೆ ಅಥವಾ ರಾ ಸಂಸ್ಥೆಗೆ ಹಸ್ತಾಂತರಿಸಬಹುದು. ನಮ್ಮ ದೇಶದ ಗುಪ್ತ ವಿಚಾರವನ್ನು ವೈರಿರಾಷ್ಟ್ರಕ್ಕೆ ಬಿಟ್ಟುಕೊಟ್ಟಿದ್ದಾರೆಯೇ ಅಂತ ವಿಚಾರಣೆ ನಡೆಸಬಹುದು. ಹಾಗೂ ಶತ್ರುರಾಷ್ಟ್ರದ ರಹಸ್ಯವೇನಾದರೂ ತಿಳಿದಿದ್ದರೆ ನಮಗೆ ತಿಳಿಸಿ ಅಂತ ಕೇಳುವ ಸಾಧ್ಯತೆಗಳಿವೆ.
Advertisement
Advertisement
ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ಸಂಜೆ ವೇಳೆಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮತ್ತೆ ತನ್ನ ಕುತಂತ್ರವನ್ನು ಪ್ರದರ್ಶಿಸಿತ್ತು. ನಿನ್ನೆ ಮುಂಜಾನೆಯಿಂದಲೇ ವಾಘಾ ಗಡಿಯಲ್ಲಿ ಕಾದು ಕುಳಿತಿದ್ದ ಭಾರತೀಯ ಅಭಿಮಾನಿಗಳ ಛಲ ರಾತ್ರಿಯಾದ್ರು ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇವೆಲ್ಲದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಅಭಿನಂದನ್ ಭಾರತದ ನೆಲವನ್ನು ಪ್ರವೇಶಿಸಿದ್ದರು.
ಅಭಿನಂದನ್ ಅವರನ್ನು ಸ್ವಾಗತ ಮಾಡಲು ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಹಾಗೂ ಭಾರತ ಸರ್ಕಾರದ ಅಧಿಕಾರಿಗಳು ವಾಘಾ ಗಡಿಗೆ ಆಗಮಿಸಿದ್ದರು. ಅಲ್ಲದೇ ಅಭಿನಂದನ್ ಪೋಷಕರು ಕೂಡ ಸ್ಥಳದಲ್ಲಿ ಹಾಜರಿದ್ದರು. ವಾಘಾ ಗಡಿಯಿಂದ ನೇರ ಅವರನ್ನು ಅಮೃತಸರಕ್ಕೆ ಕರೆದ್ಯೊಯಲಾಯಿತು. ಆ ಬಳಿಕ ಅಲ್ಲಿಂದ ಸೇನಾಧಿಕಾರಿಗಳೊಂದಿಗೆ ದೆಹಲಿಗೆ ವಿಮಾನದಲ್ಲಿ ಕರೆತಂದಿದ್ದಾರೆ.
https://www.youtube.com/watch?v=ArvRnqPs81s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv