ನವದೆಹಲಿ: ಜನವರಿ 16 – 18ರ ನಡುವೆ ದೆಹಲಿಯ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡು ಬರಲಿದ್ದು, ಬಯಲು ಪ್ರದೇಶದಲ್ಲಿ -4° ತಲುಪಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಲೈವ್ ವೆದರ್ ಆಫ್ ಇಂಡಿಯಾ ಹೆಸರಿನ ಆನ್‌ಲೈನ್ ಹವಾಮಾನ (Weather) ವೇದಿಕೆಯ ಸಂಸ್ಥಾಪಕ ನವದೀಪ್ ದಹಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು ನನ್ನ ವೃತ್ತಿಜೀವನದಲ್ಲಿ ತಾಪಮಾನವು ಈ ಮಟ್ಟಕ್ಕೆ ಇಳಿಯುವುದನ್ನು ನೋಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಉತ್ತರ ಭಾರತದಲ್ಲಿ (North India) ಚಳಿಗಾಳಿಯು ಜನವರಿ 14-19ರ ಅವಧಿಯಲ್ಲಿ ಕಂಡು ಬರಲಿದ್ದು, 16-18ರ ನಡುವೆ ಗರಿಷ್ಠವಾಗಿ ಕಾಣಿಸುತ್ತದೆ. ಬಯಲು ಪ್ರದೇಶಗಳಲ್ಲಿ -4 °c ನಿಂದ +2 °c ತಾಪಮಾನ ದಾಖಲಾಗಲಿದೆ ಎಂದು ನವದೀಪ್ ದಹಿಯಾ ಹೇಳಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಕನಿಷ್ಠ ಉಷ್ಣಾಂಶ ಕುಸಿತ
Don’t know how to put this up but upcoming spell of #Coldwave in #India look really extreme during 14-19th January 2023 with peak on 16-18th, Never seen temperature ensemble going this low in a prediction model so far in my career.
Freezing -4°c to +2°c in plains, Wow! pic.twitter.com/pyavdJQy7v
— Weatherman Navdeep Dahiya (@navdeepdahiya55) January 11, 2023
ದೀರ್ಘಾವಧಿಯಲ್ಲಿ ಏಕ ಸಂಖ್ಯೆಯ ತಾಪಮಾನ ದೆಹಲಿಯಲ್ಲಿ ಇರಲಿದ್ದು, 2023ರ ಜನವರಿ 21ನೇ ಶತಮಾನದ ಅತ್ಯಂತ ಚಳಿಯ ದಿನಗಳಿರಬಹುದು ಎಂದು ಎಚ್ಚರಿಸಿದ್ದಾರೆ. ಉತ್ತರ ಮತ್ತು ವಾಯುವ್ಯ ಭಾರತದ ಭಾಗಗಳು ಈಗಾಗಲೇ ತೀವ್ರ ಚಳಿ ಮತ್ತು ದಟ್ಟವಾದ ಮಂಜಿನಿಂದ ಮುಚ್ಚಿಹೋಗಿವೆ. ಈ ವಾರದ ಆರಂಭದಲ್ಲಿ ದೆಹಲಿಯ ಸಫ್ದರ್‌ಜಂಗ್ ಹವಾಮಾನ ಕೇಂದ್ರದಲ್ಲಿ ಕನಿಷ್ಠ 1.9 ಡಿಗ್ರಿ ತಾಪಮಾನ ದಾಖಲಾಗಿದೆ.
ಅದೇ ರೀತಿ ದಕ್ಷಿಣ ಭಾರತದಾದ್ಯಂತ ಶೀತದ ಪರಿಸ್ಥಿತಿಗಳು ವರದಿಯಾಗಲಿವೆ. ಹವಾಮಾನ ಅಧಿಕಾರಿಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತರದಲ್ಲಿ ಈ ಶೀತ ಮತ್ತು ಮಂಜಿನ ಪರಿಸ್ಥಿತಿಗಳು ರೈಲು ಮತ್ತು ವಾಯು ಸಂಚಾರಕ್ಕೆ ಅಡ್ಡಿಪಡಿಸಿವೆ, ಪ್ರತಿದಿನ ಡಜನ್‌ಗಟ್ಟಲೆ ರೈಲುಗಳು ವಿಳಂಬವಾಗುತ್ತವೆ, ವಿಮಾನಗಳ ಮೇಲೆಯೂ ಇದು ಪರಿಣಾಮ ಬೀರಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k