ನವದೆಹಲಿ: ರಾಜ್ಯದ ಹಲವು ಭಾಗಗಳಲ್ಲಿ ಗಣಿಗಾರಿಕೆ ಪುನರ್ ಆರಂಭಿಸಲು ಪರವಾನಗೆ ನೀಡುವ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧರಿಸಲಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಗಣಿಗಾರಿಕೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ರಾಜ್ಯದಲ್ಲಿ ಗಣಿಗಾರಿಕೆಗೆ ತಡೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಗಣಿಗಾರಿಕೆ ಆರಂಭಿಸಲು ಪುನರ್ ಅವಕಾಶ ನೀಡಬೇಕು ಎಂದು ಗಣಿ ಕಂಪನಿಗಳ ಮಾಲೀಕರು ಸುಪ್ರೀಂಕೋರ್ಟಿಗೆ ಮನವಿ ಮಾಡಿದರು. ಆದರೆ ಇದಕ್ಕೆ ಗಣಿ ಗುತ್ತಿಗೆಗಳ ಪುನರ್ ಹಂಚಿಕೆ ಮೇಲುಸ್ತುವಾರಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿತು. ಮತ್ತು ಗಣಿಗಾರಿಕೆಗೆ ಅವಕಾಶ ನೀಡದಂತೆ ಮನವಿ ಮಾಡಿತು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾ.ಎನ್.ವಿ ರಮಣ, ಪರವಾನಿಗೆ ನೀಡುವ ಬಗ್ಗೆ ರಾಜ್ಯ ಸರ್ಕಾರವೇ ತಿರ್ಮಾನ ಮಾಡಲಿ ಗಣಿಗಾರಿಕೆಗೆ ಗುತ್ತಿಗೆ ನೀಡಬೇಕೋ, ಬೇಡವೋ ಎಂಬುದು ರಾಜ್ಯ ಸರ್ಕಾರ ಮಾರ್ಚ್ 16ರೊಳಗೆ ನಿರ್ಧಾರ ಮಾಡಿ ಸುಪ್ರೀಂಕೋರ್ಟಿಗೆ ತಿಳಿಸುವಂತೆ ಸೂಚಿಸಿದರು.
ಗಣಿಗಾರಿಕೆ ಪುನರ್ ಆರಂಭಿಸಲು ಪರವಾನಿಗೆ ಸುಪ್ರೀಂಕೋರ್ಟ್ ನೀಡುವಂತೆ ಗಣಿ ಕಂಪನಿಗಳ ಮಾಲೀಕರ ಪರ ವಕೀಲರ ಒತ್ತಡ ಹಾಕಿದರು. ಇದಕ್ಕೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು ಪರವಾನಿಗೆ ನೀಡಲು ಆದೇಶ ನೀಡುವಂತೆ ಒತ್ತಡ ಹಾಕದಂತೆ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದರು.