ನವದೆಹಲಿ: ಇಡಿ ಕಸ್ಟಡಿಯಲ್ಲಿರುವ ಕನಕಪುರ ಬಂಡೆಗೆ ಇಡಿ ಅಧಿಕಾರಿಗಳು ನಾಲ್ಕು ದಿನಗಳಿಂದ ಅದ್ಯಾವ ಮಟ್ಟಿಗೆ ಡ್ರಿಲ್ ಮಾಡುತ್ತಿದ್ದಾರೆ ಎಂದರೆ, ಶೇವಿಂಗ್ ಮಾಡಿಕೊಳ್ಳಲು ಕೂಡ ಅವಕಾಶ ಕೊಡುತ್ತಿಲ್ಲ. ಅಷ್ಟೇ ಅಲ್ಲ ಪಾಯಿಂಟ್ಸ್ ಮಾಡಿಕೊಳ್ಳುತ್ತೇನೆ ಅಂದರೂ ಪೆನ್ನು ಪೇಪರೂ ಕೊಡುತ್ತಿಲ್ಲ. ಇಡಿ ಅಧಿಕಾರಿಗಳ ಈ ವರ್ತನೆಯಿಂದ ಬೇಸತ್ತು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಈಗ ಕೋರ್ಟ್ ಮೊರೆ ಹೋಗಿದ್ದಾರೆ.
ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಳೆದೊಂದು ವಾರದಿಂದ ಇಡಿ ವಿಚಾರಣೆಗೆ ಒಳಗಾಗಿರುವ ಡಿ.ಕೆ ಶಿವಕುಮಾರ್‍ಗೆ ಶೇವಿಂಗ್ ಮಾಡೋಕು ಅನುಮತಿ ಇಲ್ಲ. ಇಡಿ ಅಧಿಕಾರಿಗಳನ್ನು ಕೇಳಿದರೆ ಅನುಮತಿ ನಿರಾಕರಿಸಿದರು. ಹೀಗಾಗಿ ಕ್ಷೌರ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟಿಗೆ ಡಿಕೆಶಿ ಅರ್ಜಿ ಸಲ್ಲಿಸಿದ್ದಾರೆ. ಜೊತೆ ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಪೆನ್ನು, ಪೇಪರ್ ಬೇಕು ಅಂತಲೂ ಮನವಿ ಮಾಡಿದ್ದಾರೆ. ಕೋರ್ಟ್ ಸೋಮವಾರ ಅರ್ಜಿ ವಿಚಾರಣೆ ನಡೆಸಲಿದೆ.
Advertisement
Advertisement
ಡಿಕೆಶಿಯವರಿಗೆ ಶೇವಿಂಗ್‍ಗೆ ಎಂದು ಬ್ಲೇಡ್ ಕೊಟ್ಟಾಗ ಅವರು ಆತ್ಮಹತ್ಯೆಗೆ ಯತ್ನಿಸಿದರೆ ಯಾರು ಹೊಣೆ. ಹೀಗಾಗಿ ನಾವು ಬ್ಲೇಡ್ ಕೊಟ್ಟಿಲ್ಲ ಎಂದು ಇಡಿ ಮತ್ತು ದೆಹಲಿ ಪೊಲೀಸರು ಸಬೂಬು ಕೊಟ್ಟಿದ್ದಾರೆ. ಈ ಹಿಂದೆ ಬ್ಲೇಡ್‍ನಿಂದ ಆತ್ಮಹತ್ಯೆಗೆ ಯತ್ನಿಸಿದ ಸಾಕಷ್ಟು ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಬ್ಲೆಡ್ ಕೊಡಲು ಸಾಧ್ಯವಿಲ್ಲ ಜೊತೆಗೆ ಪೇಪರ್ ತಿನ್ನುವ ಮೂಲಕ ಆರೋಗ್ಯ ಕೆಡಿಸಿಕೊಂಡು ವಿಚಾರಣೆಯಿಂದ ಪಾರಾಗಬಹುದು ಅಥವಾ ಪೆನ್ನಿನಿಂದ ದೇಹಕ್ಕೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವಾದಿಸಿದ್ದಾರೆ.
Advertisement
ಡಿ.ಕೆ ಸುರೇಶ್ ವಕೀಲರೊಂದಿಗೆ ಸಹೋದರನ ಭೇಟಿಯಾದರು. ಈ ವೇಳೆ ಇಡಿ ಅಧಿಕಾರಿಗಳ ವಿಚಾರಣೆ ವೇಳೆ ಹೇಗೆ ಉತ್ತರಿಸಬೇಕೆಂದು ಡಿಕೆಶಿಗೆ ಸಲಹೆ ಕೊಟ್ಟಿದ್ದಾರೆ. ಗೊತ್ತಿದ್ದರೆ ಗೊತ್ತಿದೆ ಅನ್ನಿ, ಇಲ್ಲದಿದ್ದರೆ ಇಲ್ಲ ಅನ್ನಿ. ದಾಖಲೆ ನೋಡಿ ಉತ್ತರಿಸುವೆ ಎಂದಷ್ಟೇ ಹೇಳಿ. ಯಾವುದೇ ಒತ್ತಡಕ್ಕೆ ಮಣಿಯುವ ಅಗತ್ಯ ಇಲ್ಲ. ಜೊತೆಗೆ ಉತ್ತರಿಸಲೇಬೇಕು ಎಂದು ಕೋರ್ಟ್ ಆದೇಶ ನೀಡಿಲ್ಲ ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
Advertisement
ಸಾಲು ಸಾಲು ರಜೆಗಳಿದ್ದು ಡಿಕೆಶಿಯನ್ನು ವಿಚಾರಣೆ ನಡೆಸುವ ಅಥವಾ ವಿಶ್ರಾಂತಿ ಕೊಡುವ ಬಗ್ಗೆ ಇ.ಡಿ ಅಧಿಕಾರಿಗಳು ನಿರ್ಧರಿಸಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.