ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ಬಲೆಯಲ್ಲಿ ಸಿಲುಕಿರುವ ಡಿಕೆಶಿ ಕಸ್ಟಡಿ ಮುಗಿಸಿ ಹೊರಬರುವ ಪ್ಲಾನ್‍ನಲ್ಲಿದ್ದಾರೆ. ಆದರೆ ಈಗ ಅವರಿಗೆ ಹೊಸ ಟೆನ್ಶನ್ ಶುರುವಾಗಿದೆ.
ಅಕ್ರಮ ಹಣ ವರ್ಗಾವಣೆ, ಹವಾಲಾ ಕೇಸ್‍ನಲ್ಲಿ ಕಳೆದೊಂದು ವಾರದಿಂದ ಇಡಿ ಹಿಡಿತದಲ್ಲಿರುವ ಕನಕಪುರ ಬಂಡೆ ಡಿಕೆಶಿ ಬಳಲಿ ಬೆಂಡಾಗಿದ್ದಾರೆ. ಡಿಕೆಶಿ ಇಂದು ಏಳನೇ ದಿನದ ವಿಚಾರಣೆ ಎದುರಿಸಲಿದ್ದಾರೆ. ಸೆಪ್ಟೆಂಬರ್ 4 ರಿಂದ 13 ರವರೆಗೂ ಅಂದರೆ ಒಟ್ಟು 10 ದಿನಗಳ ಕಾಲ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿ ಇಡಿ ವಿಶೇಷ ಕೋರ್ಟ್ ಆದೇಶಿಸಿತ್ತು. ಆದೇಶದಂತೆ ಇನ್ನು ಮೂರು ದಿನಗಳಲ್ಲಿ ಕಸ್ಟಡಿ ಅಂತ್ಯವಾಗಲಿದೆ. ಆದರೆ ಜಾಮೀನು ಪಡೆದು ಹೊರಬರಬೇಕು ಅಂದುಕೊಂಡಿದ್ದ ಡಿಕೆಶಿಗೆ ಹೊಸ ಆತಂಕ ಶುರುವಾಗಿದೆ.
Advertisement
Advertisement
ಪ್ರಕರಣ ಮತ್ತಷ್ಟು ವಿಚಾರಣೆಗಾಗಿ ಡಿಕೆ ಶಿವಕುಮಾರ್ ಅವರನ್ನು ಇನ್ನೂ ನಾಲ್ಕು ದಿನ ಕಸ್ಟಡಿಗೆ ಕೇಳಲು ಇಡಿ ಅಧಿಕಾರಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 13ರಂದು ಇಡಿ ಕೋರ್ಟ್ ಮುಂದೆ ಹಾಜರುಪಡಿಸಿ ಮತ್ತೆ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಳ್ಳುವ ಲೆಕ್ಕಾಚಾರ ಇಡಿ ಅಧಿಕಾರಿಗಳು ಹಾಕಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
Advertisement
ಡಿಕೆಶಿ ವಿಚಾರಣೆಗೆ ಸ್ಪಂದಿಸುತ್ತಿಲ್ಲ, ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ. ಏನೇ ಕೇಳಿದರೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಪ್ರಕರಣ ವಿಸ್ತಾರವಾಗಿದ್ದು ಮತ್ತಷ್ಟೂ ವಿಚಾರಣೆಯ ಅವಶ್ಯಕತೆ ಇದೆ. ಹೀಗಾಗಿ ಇನ್ನು ನಾಲ್ಕು ದಿನ ಕಸ್ಟಡಿಗೆ ವಿಸ್ತರಣೆ ಮಾಡುವಂತೆ ಇಡಿ ಅಧಿಕಾರಿಗಳು ಕೋರ್ಟಿಗೆ ಮನವಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಿಯಮಗಳ ಪ್ರಕಾರ 14 ಕಸ್ಟಡಿಗೆ ತೆಗೆದುಕೊಳ್ಳುವ ಅವಕಾಶ ಇದೆ.
Advertisement
ಡಿಕೆಶಿಗಾಗಿ ಹಿತೈಷಿಗಳು ಪೂಜೆ ನಡೆಸಿ ಬಂಧನಮುಕ್ತರಾಗುವಂತೆ ಬೇಡಿಕೊಂಡರು. ಇನ್ನೊಂದೆಡೆ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಆಗಮಿಸಿ ಪತ್ನಿ ಮತ್ತು ಮಕ್ಕಳಿಗೆ ಧೈರ್ಯ ತುಂಬಿದರು. ಒಟ್ಟಿನಲ್ಲಿ ವಿಚಾರಣೆ ಅಂತ್ಯವಾಯ್ತು ಎಂದು ದಿನಗಳನ್ನು ಕೌಂಟ್ ಮಾಡುತ್ತಿದ್ದ ಬಂಡೆಗೆ ಇಡಿ ಅಧಿಕಾರಿಗಳ ಹೊಸ ಪ್ಲಾನ್‍ನಿಂದ ಆತಂಕ ಶುರುವಾಗಿದ್ದು, ಮತ್ತೆಲ್ಲಿ ಕೋರ್ಟ್ ಕಸ್ಟಡಿ ವಿಸ್ತರಿಸುತ್ತೊ ಅನ್ನೋ ಭೀತಿಯಲ್ಲಿದ್ದಾರೆ.