ನವದೆಹಲಿ: ಬಿಜೆಪಿಗರು ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಶ್ರೀರಾಮನು ಎಂದಿಗೂ ದ್ವೇಷದ ಬಗ್ಗೆ ಹೇಳಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ರಾಮಾಯಣ ಹಾಗೂ ಭಗವದ್ಗೀತೆಯಲ್ಲಿರುವ ಹಿಂದುತ್ವದ ಬಗ್ಗೆ ನನಗೆ ನಂಬಿಕೆ ಇದೆ. ರಾಮಾಯಣದಲ್ಲಿ ಶ್ರೀರಾಮ ಹೇಳಿರುವುದೆಲ್ಲವೂ ಹಿಂದುತ್ವವೇ ಆಗಿದೆ. ಶ್ರೀರಾಮನು ನಮ್ಮ ನಡುವೆಯೇ ದ್ವೇಷ ಮಾಡಿ ಎಂದು ಎಂದಿಗೂ ಕಲಿಸಿಲ್ಲ. ಆದರೆ ಇವರು ದ್ವೇಷದ ಹೆಸರಲ್ಲಿ ಅನೇಕರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇತ್ತೀಚಿನ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಿಂದುತ್ವದ ಅಜೆಂಡಾದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಯಿತು. ಯಾಕೆಂದರೆ ಪ್ರತಿಪಕ್ಷಗಳು ಪ್ರಬಲವಾಗಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿ: ಅರ್ಧ ಮನೆಯೇ ಧ್ವಂಸ
ಪಂಜಾಬ್‍ನಲ್ಲಿ ತನ್ನ ಇತ್ತೀಚಿನ ಚುನಾವಣಾ ಗೆಲುವಿನ ನಂತರ, ಆಮ್ ಆದ್ಮಿ ಪಕ್ಷವು ಗುಜರಾತ್‍ನ ಸ್ಪರ್ಧಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗುಜರಾತ್‍ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್