ನವದೆಹಲಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಬಂಧಿಸಲು ಪಂಜಾಬ್‍ನ ಆಪ್ ನೇತೃತ್ವದ ಸರ್ಕಾರವು ರಾಜ್ಯ ಪೊಲೀಸ್ ಪಡೆಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜೀಂದರ್ ಪಾಲ್ ಸಿಂಗ್ ವಾಪಸ್ ಮನೆಗೆ ಮರಳಿದ್ದಾರೆ. ಇದು ಪ್ರಜಾಪ್ರಭುತ್ವದ ಮತ್ತು ನ್ಯಾಯದ ವಿಜಯವಾಗಿದೆ. ತಜೀಂದರ್ ಸಿಂಗ್ ಬಿಡುಗೆಡೆಯಿಂದಾಗಿ ಕೇಜ್ರಿವಾಲ್ ಅವರ ದುರಹಂಕಾರ ಮುರಿದಿದೆ. ಅವರು ಬಗ್ಗಾವನ್ನು ಬಂಧಿಸಲು ಪಂಜಾಬ್ ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ತಜೀಂದರ್ ಪಾಲ್ ಸಿಂಗ್‍ರನ್ನು ಬಂಧಿಸುವಾಗ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂದು ಕಿಡಿಕಾರಿದರು.
Advertisement
Advertisement
ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮತ್ತು ಕಾಶ್ಮೀರಿ ಪಂಡಿತರಿಗೆ ತೋರಿದ ಅಗೌರವಕ್ಕೆ ಕ್ಷಮೆ ಯಾಚಿಸುವುದು ಅಪರಾಧವಾಗಿದ್ದರೆ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ಈ ಅಪರಾಧವನ್ನು ಮುಂದುವರಿಸುತ್ತಾರೆ ಎಂದರು. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಟೀಕೆ- ಪೊಲೀಸರಿಂದ ದೆಹಲಿ ಬಿಜೆಪಿ ಮುಖಂಡ ಅರೆಸ್ಟ್
Advertisement
Advertisement
ಯಾವುದೇ ರೀತಿಯ ಕ್ರಮಕ್ಕೂ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ. ಕೇಜ್ರಿವಾಲ್ ಅವರ ದುರಹಂಕಾರದ ವಿರುದ್ಧ ನಾವು ಹೋರಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಇದು ಸೇಡಿನ ರಾಜಕಾರಣ: ಬಿಜೆಪಿ ಮುಖಂಡನ ಬಂಧನಕ್ಕೆ ನವಜೋತ್ ಸಿಧು ಕಿಡಿ
ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ ನಂತರ ತಜೀಂದರ್ ಸಿಂಗ್ ಮಧ್ಯ ರಾತ್ರಿ ದೆಹಲಿಯಲ್ಲಿರುವ ಅವರ ನಿವಾಸವನ್ನು ತಲುಪಿದರು. ತಜೀಂದರ್ ಸಿಂಗ್ ಅವರ ಕುಟುಂಬದ ಸದಸ್ಯರು ದೆಹಲಿಯಲ್ಲಿರುವ ಅವರ ಮನೆಗೆ ಹಿಂದಿರುಗಿದ ನಂತರ ಸಂಭ್ರಮಿಸಿದ್ದರು. ಇದನ್ನೂ ಓದಿ: ಬಿಜೆಪಿ ನಾಯಕನನ್ನು ದೆಹಲಿ ಪೊಲೀಸರಿಗೆ ಮಾತ್ರ ಹಸ್ತಾಂತರಿಸುತ್ತೇವೆ: ಹರಿಯಾಣ ಗೃಹ ಸಚಿವ