ನವದೆಹಲಿ: ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದ ಅಮೂಲ್ಯಳನ್ನ ಭಯೋತ್ಪಾದಕಿ ಎಂದು ಘೋಷಿಸಲಿ. ಸುಪ್ರೀಂಕೋರ್ಟ್ ಗಲ್ಕು ಶಿಕ್ಷೆ ವಿಧಿಸಿಲಿ ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.
ಅಮೂಲ್ಯ ಹೇಳಿಕೆಗೆ ನಿನ್ನೆ ಸಂಜೆಯಿಂದ ವ್ಯಾಪಕ ಟೀಕೆ ಕೇಳಿ ಬಂದಿದ್ದು ಇಂದು ಟ್ವಿಟರ್ ಇಂಡಿಯಾದಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ರಾಷ್ಟ್ರ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು ಅಮೂಲ್ಯ ಹೇಳಿಕೆ ಪರ-ವಿರೋಧ ಚರ್ಚೆ ಗೆ ಟ್ವಿಟ್ಟರ್ ವೇದಿಕೆಯಾಗಿದೆ.
ಹ್ಯಾಶ್ ಖಾತೆಯೊಂದರ ಹೆಸರಿನಲ್ಲಿ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು ಹುತ್ಮಾತ ಸೈನಿಕರೊಬ್ಬರ ಪುತ್ರಿ ರೋಧಿಸುವ ವಿಡಿಯೋ ಹಾಕಿರುವ ಅಮೂಲ್ಯ ಹೇಳಿಕೆ ಕೇಳಿ ಆ ಪುತ್ರಿಗೆ ಏನಿಸಬಹುದು ಎಂದು ಪ್ರಶ್ನಿಸಿದ್ದಾರೆ. ದೇಶ ವಿರೋಧಿ ಘೋಷಣೆ ಕೂಗುವರನ್ನ ಭಯೋತ್ಪಾದಕರೆಂದು ಗುರುತಿಸಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಟ್ವಿಟ್ಟರ್ ಬಳಕೆದಾರ ಉಪಸಾನ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ರೀತಿ ಘೋಷಣೆ ಕೂಗುವುದು ಹೆಚ್ಚಾಗಿದೆ ಜೈಲಿಗೆ ಹೋಗಿ ಹೊರ ಬಂದು ದೊಡ್ಡ ನಾಯಕರಾಗುತ್ತಾರೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ದೇಶದಲ್ಲಿ ಏನು ನೋಡಬೇಕು ಎಂದೆಲ್ಲ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ರವಿಶಂಕರ್ ಗುರೂಜಿ ಪಾಕಿಸ್ತಾನ ಜಿಂದಾಬಾದ್ ಎಂದಿರುವ ವಿಡಿಯೋ ಹಾಕಿ ಸಮರ್ಥಿಸಿಕೊಂಡರೆ, ಅಮೂಲ್ಯಳ ಹಳೆಯ ಫೇಸ್ಬುಕ್ ಪೊಸ್ಟ್ ಹಾಕಿ ಕೆಲವರು ಅವಳ ಉದ್ದೇಶ ಬೇರೆಯಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ನಡೆದಿದ್ದೇನು?
ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ.