CrimeLatestMain PostNational

500 ರೂ.ಗಾಗಿ ನಡೆಯಿತು ಸ್ನೇಹಿತನ ಕೊಲೆ

ನವದೆಹಲಿ: ಕೇವಲ 500 ರೂ.ಗಾಗಿ ನಡೆದ ಜಗಳದಲ್ಲಿ ಸ್ನೇಹಿತನನ್ನು (Friend) ಯುವಕನೇ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ (New Delhi) ನಡೆದಿದೆ.

ಶಾರುಖ್(22) ಮೃತ ವ್ಯಕ್ತಿ. ಶಾರುಖ್ ಸ್ನೇಹಿತ ಸಲ್ಮಾನ್(25)ನೊಂದಿಗೆ ಸಣ್ಣ ಜಗಳವಾಡಿದ್ದ (Argument). ಇದರಿಂದ ಕೋಪಗೊಂಡ ಶಾರುಖ್‍ಗೆ ಸಲ್ಮಾನ್ ಚಾಕುವಿನಿಂದ (Knife) ಇರಿದಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶಾರುಖ್‍ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ

crime

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಲ್ಮಾನ್‍ನನ್ನು ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಇಬ್ಬರು ಮಾದಕ ವ್ಯಸನಿಗಳಾಗಿದ್ದರು. ಶಾರುಖ್ ಕೆಲವು ಮಾದಕವಸ್ತುಗಳನ್ನು ತರಲು 500 ರೂ. ನೀಡಿದ್ದ. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಜಗಳವಾಗಿತ್ತು. ಸೇಡು ತೀರಿಸಿಕೊಳ್ಳಲು ಶಾರುಖ್‍ಗೆ ಚಾಕುವಿನಿಂದ ಸಲ್ಮಾನ್ ಇರಿದು ಪರಾರಿಯಾಗಿದ್ದಾನೆ ಎಂಬ ವಿಷಯ ಬಹಿರಂಗವಾಗಿದೆ. ಇದನ್ನೂ ಓದಿ: ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Live Tv

Leave a Reply

Your email address will not be published.

Back to top button