
ಬೆಳಗಾವಿ: ಖಾನಾಪುರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ್ದ ಸ್ಥಿತಿಯಲ್ಲಿ ಎರಡು ದಿನದ ನವಜಾತ ಶಿಶು ಪತ್ತೆಯಾಗಿದೆ.
ಖಾನಾಪುರದ ತಹಶೀಲ್ದಾರ್ ಕಚೇರಿ ಮುಂಭಾಗದ ಮಾವಿನ ಮರದ ಕೆಳಗೆ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಸ್ಥಳೀಯರು ಶಿಶುವನ್ನು ನೋಡಿ ಗಮನಿಸಿ ಸ್ಥಳದಲ್ಲಿ ಯಾರು ಪತ್ತೆಯಾಗದೇ ಇದ್ದಾಗ ಖಾನಾಪೂರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 250 ರೂ. ಹಣ ಕೊಡದಿದ್ದಕ್ಕೆ ಬಿಯರ್ ಬಾಟಲ್‍ನಿಂದ ತಲೆಗೆ ಹೊಡೆದು ಕೊಲೆ
ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಶುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮತ್ತು ದಾದಿಯರು ಮಗುವನ್ನು ಪರೀಕ್ಷಿಸಿ ಶಿಶು ಕಲ್ಯಾಣಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಆ ಬಳಿಕ ಮಗುವನ್ನು ಬೆಳಗಾವಿಗೆ ಕಳುಹಿಸಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಲೈಂಗಿಕ ತೃಷೆ ತೀರಿಸಿಕೊಳ್ಳಲು ಹೋಗಿ ವ್ಯಕ್ತಿ ಎಡವಟ್ಟು – ಎಕ್ಸ್ ರೇ ನೋಡಿ ವೈದ್ಯರೇ ಶಾಕ್