ಬ್ಯಾಂಕಾಕ್: ಥೈಲ್ಯಾಂಡ್‍ನಲ್ಲಿ ಕೊರೊನಾ ವೈರಸ್‍ನಿಂದ ನವಜಾತ ಶಿಶುಗಳನ್ನು ರಕ್ಷಿಸಲು ಹೊಸ ಪ್ಲಾನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಹುಟ್ಟಿದ ಶಿಶುಗಳಿಗೆ ಸ್ಪೆಷಲ್ ಫೇಸ್ ಶೀಲ್ಡ್ ಹಾಕುವ ಮೂಲಕ ಮಕ್ಕಳಿಗೆ ವೈರಸ್ ಹರಡುವುದನ್ನು ತಡೆಗಟ್ಟಲು ಆಸ್ಪತ್ರೆ ಸಿಬ್ಬಂದಿ ಮುಂದಾಗಿದ್ದಾರೆ.
ಬ್ಯಾಂಕಾಕ್‍ನ ಪ್ರರಮ್ 9 ಆಸ್ಪತ್ರೆಯಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿರುವ ಶಿಶುಗಳ ಮುಖಕ್ಕೆ ಶೀಲ್ಡ್ ಹಾಕಿ ಕೊರೊನಾ ಸೋಂಕು ತಗುಲದಂತೆ ನಿಗಾವಹಿಸಲಾಗಿದೆ.
Advertisement
Advertisement
ಈವರೆಗೆ ಥೈಲ್ಯಾಂಡ್‍ನಲ್ಲಿ 2,473 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಅವರಲ್ಲಿ 33 ಮಂದಿ ಸಾವನ್ನಪ್ಪಿದ್ದು, 1,013 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
Advertisement
ಶುಕ್ರವಾರ ಒಂದೇ ದಿನ ಥೈಲ್ಯಾಂಡ್‍ನಲ್ಲಿ 50 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಈ 50 ಸೋಂಕಿತರಲ್ಲಿ 27 ಮಂದಿ ಹಳೆಯ ಸೋಂಕಿತ ರೋಗಿಗಳ ಸಂಪರ್ಕದಲ್ಲಿ ಇದ್ದವರಾಗಿದ್ದು, 8 ಮಂದಿಗೆ ಸೋಂಕು ಹೇಗೆ ತಗುಲಿತು ಎಂಬ ಮಾಹಿತಿ ಇರದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ.
Advertisement
ವಿಶ್ವಾದ್ಯಂತ ಬರೋಬ್ಬರಿ 17,00,951 ಮಂದಿಗೆ ಕೊರೊನಾ ತಗುಲಿದ್ದು, ಈವರೆಗೆ 1,02,789 ಮಂದಿ ಸಾವನ್ನಪ್ಪಿದ್ದಾರೆ, ಅಲ್ಲದೆ 3,76,796 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.