ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

Public TV
1 Min Read
New Zealand MP Hana Rawhiti Kareariki Maipi Clarke

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ಮಾವೊರಿ ಸಮುದಾಯದ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜನಾಂಗೀಯ ವಿಭಜನೆಯನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಲಾದ ವಿವಾದ್ಮಾತಕ ಬಿಲ್ ಮಂಡನೆ ವೇಳೆ ಸಂಸತ್‌ನಲ್ಲಿ ಹೈಡ್ರಾಮಾ ನಡೆದಿದೆ.

ಕಿರಿಯ ಸಂಸದೆ, 22 ವರ್ಷದ ಹನಾ-ರಾವ್ಹಿತಿ ಮೈಪಿ-ಕ್ಲಾರ್ಕ್ ಅವರು ವಿವಾದಾತ್ಮಕ ಒಪ್ಪಂದದ ತತ್ವಗಳ ಮಸೂದೆಯ ಪ್ರತಿಯನ್ನು ಬಿಲ್ ಮಂಡನೆ ವೇಳೆಯೇ ಹರಿದು ಹಾಕುವ ಬಿಲ್ ಅನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಹನಾ-ರಾವ್ಹಿತಿ ಮೈಪಿ-ಕ್ಲಾರ್ಕ್ ಕೆಲಸವನ್ನು ಗ್ಯಾಲರಿಯಲ್ಲಿದ್ದ ಸಾರ್ವಜನಿಕರು ಬೆಂಬಲಿಸಿದರೆ, ಸದನದ ನಿಯಮಗಳ ಉಲ್ಲಂಘನೆ ಹಿನ್ನೆಲೆ ಅವರನ್ನು ಅಮಾನತು ಮಾಡಲಾಯಿತು. ಇದನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – 12 ಬಲಿ

ಕೋಲಾಹಲದ ನಡುವೆ ಅಂತಿಮವಾಗಿ ಮಸೂದೆಯನ್ನು ಅಂಗೀಕರಿಸಲಾಯಿತು. ಮಸೂದೆಯು 1840 ರಲ್ಲಿ ಸಹಿ ಮಾಡಿದ ವೈತಾಂಗಿ ಒಪ್ಪಂದದ ಮೇಲೆ ಕೇಂದ್ರೀಕರಿಸಿದೆ. ಒಪ್ಪಂದದ ತತ್ವಗಳು ಎಲ್ಲ ನ್ಯೂಜಿಲೆಂಡ್‌ನವರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ಈ ಕ್ರಮವು ತೀವ್ರ ಟೀಕೆಗೆ ಗುರಿಯಾಗಿದೆ. ಇದು ಮಾವೊರಿ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜನಾಂಗೀಯ ವಿಭಜನೆಯನ್ನು ಪ್ರಚೋದಿಸುತ್ತದೆ ಎಂದು ವಿರೋಧಿಗಳು ವಾದಿಸುತ್ತಾರೆ.

ಮಸೂದೆ ಮಂಡಿಸಿದ ACT ಪಕ್ಷದ ನಾಯಕ ಡೇವಿಡ್ ಸೆಮೌರ್, ತಮ್ಮ ಪ್ರಸ್ತಾವನೆಯು ಒಪ್ಪಂದದ ತತ್ವಗಳಿಗೆ ಸ್ಪಷ್ಟತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ವಾದಿಸುತ್ತಾರೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು

Share This Article