ಲಾಹೋರ್ : ರಚಿನ್ ರವೀಂದ್ರ (Rachin Ravindra) ಮತ್ತು ಕೇನ್ ವಿಲಿಯಮ್ಸನ್ (Kane Williamson) ಅವರ ಶತಕದಿಂದ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನ್ಯೂಜಿಲೆಂಡ್ (New Zealand ) 50 ರನ್‌ಗಳಿಂದ ಜಯಗಳಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ (ICC Champions Trophy) ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಹೊಡೆಯಿತು. ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
Temba Bavuma and Rassie van der Dussen get South Africa’s chase going 👊
Watch this live in your territory now – head here 👉https://t.co/S0poKnwS4p#SAvNZ #ChampionsTrophy pic.twitter.com/9PC6G6Ot91
— ICC (@ICC) March 5, 2025
ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಕೊನೆಯವರೆಗೂ ಇದ್ದು ಹೋರಾಡಿದ್ದರಿಂದ ತಂಡ 300 ರನ್‌ಗಳ ಗಡಿಯನ್ನು ದಾಟಿತ್ತು. ಮಿಲ್ಲರ್ ಅಜೇಯ 100 ರನ್ (67 ಎಸೆತ, 10 ಬೌಂಡರಿ, 4 ಸಿಕ್ಸ್) ಸಿಡಿಸಿದರು. ಇಂದಿನ ಪಂದ್ಯ ಗೆದ್ದಿರುವ ನ್ಯೂಜಿಲೆಂಡ್ ಭಾನುವಾರ ದುಬೈನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತ (Team India) ತಂಡವನ್ನು ಎದುರಿಸಲಿದೆ.
Advertisement
ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ನಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ನಾಯಕ ಟೆಂಬಾ ಬವುಮಾ 56 ರನ್(71 ಎಸೆತ, 4 ಬೌಂಡರಿ, 1 ಸಿಕ್ಸರ್), ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 69 ರನ್(66 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು.
Advertisement
Will Young and Rachin Ravindra take on South Africa bowlers early 👊
Watch this live in your territory now – head here 👉 https://t.co/S0poKnxpTX#SAvNZ #ChampionsTrophy pic.twitter.com/pu9YLwRpQv
— ICC (@ICC) March 5, 2025
Advertisement
ಮಿಚೆಲ್ ಸ್ಯಾಂಟ್ನರ್ 3 ವಿಕೆಟ್ ಪಡೆದರೆ, ಗ್ಲೇನ್ಸ್ ಫಿಲಿಪ್ಸ್ ಮತ್ತು ಮ್ಯಾಟ್ ಹೆನ್ರಿ ತಲಾ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ರಚಿನ್ ರವೀಂದ್ರ 108 ರನ್(101 ಎಸೆತ, 13 ಬೌಂಡರಿ, 1 ಸಿಕ್ಸ್) ಕೇನ್ ವಿಲಿಯಮ್ಸನ್ 102 ರನ್(94 ಎಸೆತ, 10 ಬೌಂಡರಿ, 2 ಸಿಕ್ಸ್), ಗ್ಲೇನ್ ಫಿಲಿಪ್ಸ್ 49 ರನ್(27 ಎಸೆತ, 6 ಬೌಂಡರಿ, 1 ಬೌಂಡರಿ) ಹೊಡೆದು ಔಟಾದರು. ಎರಡನೇ ವಿಕೆಟಿಗೆ ರಚಿನ್ ಮತ್ತು ವಿಲಿಯಮ್ಸನ್ 154 ಎಸೆತಗಳಲ್ಲಿ 164 ರನ್ ಜೊತೆಯಾಟವಾಡಿದರು.