ಭರ್ಜರಿ ಬೌಲಿಂಗ್‌, ಬ್ಯಾಟಿಂಗ್‌- ಪಾಕಿಸ್ತಾನಕ್ಕೆ 5 ವಿಕೆಟ್‌ಗಳ ಜಯ

Public TV
1 Min Read
pakistan cricket team

ಶಾರ್ಜಾ: ಬೌಲಿಂಗ್‌, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನ ಟಿ20 ವಿಶ್ವಕಪ್‌ ಕ್ರಿಕೆಟ್‌ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.

135 ರನ್‌ಗಳ ಗುರಿಯನ್ನು ಪಡೆದ ಪಾಕಿಸ್ತಾನ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು. ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು.

Fakhar Zaman

ಪಾಕಿಸ್ತಾನದ ಪರವಾಗಿ ಮೊಹಮ್ಮದ್‌ ರಿಜ್ವಾನ್‌ 33 ರನ್‌(34 ಎಸೆತ, 5 ಬೌಂಡರಿ), ಶೊಯಬ್‌ ಮಲಿಕ್‌ ಔಟಾಗದೇ 26 ರನ್‌(20 ಎಸೆತ, 2 ಬೌಂಡರಿ, 1 ಸಿಕ್ಸರ್‌), ಕೊನೆಯಲ್ಲಿ ಅಸೀಫ್‌ ಆಲಿ 27 ರನ್‌(12 ಎಸೆತ, 1 ಬೌಂಡರಿ, 3 ಸಿಕ್ಸರ್‌) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

Guptill

ಕೊನೆಯ 24 ಎಸೆತದಲ್ಲಿ ಪಾಕಿಸ್ತಾನದ ಗೆಲುವಿಗೆ 37 ರನ್‌ ಬೇಕಿತ್ತು. ಸೌತಿ ಎಸೆದ 17ನೇ ಓವರಿನಲ್ಲಿ ಅಸೀಫ್‌ ಆಲಿ 2 ಸಿಕ್ಸರ್‌ ಸಿಡಿಸಿದರೆ 18ನೇ ಓವರಿನಲ್ಲಿ ಮಲಿಕ್‌ 1 ಬೌಂಡರಿ, 1 ಸಿಕ್ಸರ್‌ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನ್ಯೂಜಿಲೆಂಡ್‌ಗೆ ಹ್ಯಾರಿಸ್‌ ರವೂಫ್‌ ಕಾಡಿದರು. ಆರಂಭಿಕ ಆಟಗಾರ ಡೇರಿಲ್ ಮಿಚೆಲ್‌ 27 ರನ್‌(20 ಎಸೆತ, 1 ಬೌಂಡರಿ, 2 ಸಿಕ್ಸರ್‌) ಡೆವೊನ್‌ ಕಾನ್ವೆ 27 ರನ್‌(24 ಎಸೆತ, 3 ಬೌಂಡರಿ), ನಾಯಕ ಕೇನ್‌ ವಿಲಿಯಮ್ಸನ್‌ 25 ರನ್‌(24 ಎಸೆತ, 3 ಬೌಂಡರಿ) ಹೊಡೆದು ಔಟಾದರು. ಅಂತಿಮವಾಗಿ 8 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು.

ರಾವುಫ್‌ 4 ವಿಕೆಟ್‌ ಕಿತ್ತರೆ, ಶಾಹೀನ್‌ ಅಫ್ರಿದಿ, ಇಮಾದ್‌ ವಾಸೀಂ, ಮೊಹಮ್ಮದ್‌ ಹಫೀಸ್‌ ತಲಾ ಒಂದು ವಿಕೆಟ್‌ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *