ಕ್ಯಾನ್ಬೆರಾ: ನ್ಯೂಜಿಲೆಂಡ್ (New Zealand) ಹಾಗೂ ಪಾಕಿಸ್ತಾನ (Pakistan) ತಂಡಗಳು ಇಂದಿನ ಮೊದಲ ಸೆಮಿಫೈನಲ್ (1st Semi Final) ಪಂದ್ಯದಲ್ಲಿ ಸೆಣಸಾಡಲಿವೆ. ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಹಾಕಲು ಉಭಯ ತಂಡಗಳು ರಣತಂತ್ರ ಹೆಣೆದಿವೆ.
Advertisement
ಲೀಗ್ ಪಂದ್ಯಗಳಲ್ಲಿ ಬಲಿಷ್ಠ ತಂಡಗಳನ್ನ ಬಗ್ಗು ಬಡಿದಿರೋ ನ್ಯೂಜಿಲೆಂಡ್ (New Zealand), ಕೇವಲ ಒಂದು ಪಂದ್ಯದಲ್ಲಿ ಸೋಲುಂಡಿದೆ. ಇತ್ತ, ಪಾಕ್ ಪಡೆ ಲೀಗ್ ಪಂದ್ಯದಲ್ಲಿ ಆರಂಭಿಕ 2 ಪಂದ್ಯಗಳನ್ನ ಕೈಚೆಲ್ಲಿ ನಂತರ ಫಿನಿಕ್ಸ್‌ನಂತೆ ಎದ್ದು ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ. ಇದನ್ನೂ ಓದಿ: ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ
Advertisement
Advertisement
ಇಂದು ಮಧ್ಯಾಹ್ನ 1.30ಕ್ಕೆ ಇತ್ತಂಡಗಳು ಸಿಡ್ನಿಯ ಕ್ರೀಡಾಂಗಣದಲ್ಲಿ ಅಖಾಡಕ್ಕಿಳಿಯಲಿವೆ. ಇತ್ತಂಡಗಳಲ್ಲೂ ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲರ್‌ಗಳ ದಂಡೇ ಇದ್ದು ಭಾರೀ ಜಿದ್ದಾ-ಜಿದ್ದಿ ನಿರೀಕ್ಷಿಸಬಹುದಾಗಿದೆ. ಇದನ್ನೂ ಓದಿ: ಮುಂಬೈ ಗಲ್ಲಿಯಲ್ಲಿ ಅಭಿಮಾನಿಗಳ ಜೊತೆ ಕ್ರಿಕೆಟ್ ಆಡಿದ ಎಬಿಡಿ
Advertisement
ನ್ಯೂಜಿಲೆಂಡ್ ಹಾಗೂ ಪಾಕ್ ತಂಡಗಳ ಟಿ-20 ವಿಶ್ವಕಪ್ (T20 Worldcup) ಮುಖಾಮುಖಿಯ ರೆಕಾರ್ಡ್ ನೋಡೋದಾದ್ರೆ, ಎರಡು ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಪಾಕಿಸ್ತಾನ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ನ್ಯೂಜಿಲೆಂಡ್ ಕೇವಲ 2 ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.