ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಪ್ರಧಾನಿ (New Zealand PM) ಜಸಿಂಡಾ ಅರ್ಡೆರ್ನ್ (Jacinda Ardern) ಅವರು ಮುಂದಿನ ತಿಂಗಳು ರಾಜೀನಾಮೆ (Resignation) ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.
ನಾನು ಅಧಿಕಾರ ನಿರ್ವಹಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ರಾಜೀನಾಮೆ ನಿರ್ಧಾರ ನನ್ನದೇ ಆಗಿದೆ. ದೇಶವನ್ನು ಮುನ್ನಡೆಸುವುದು ಅತ್ಯಂತ ವಿಷೇಷವಾದ ಕೆಲಸ. ಹೀಗಾಗಿ ರಾಜೀನಾಮೆ ನೀಡಲು ಇದು ಉತ್ತಮ ಸಮಯವಾಗಿದೆ ಎಂದು ಅರ್ಡೆರ್ನ್ ತಿಳಿಸಿದ್ದಾರೆ.
Advertisement
Advertisement
ಮುಂದಿನ ಫೆಬ್ರವರಿ 2 ರಂದು ತಾವು ರಾಜೀನಾಮೆ ನೀಡುವುದಾಗಿ ಅರ್ಡೆರ್ನ್ ತಿಳಿಸಿದ್ದಾರೆ. ಅಕ್ಟೋಬರ್ 14 ರಂದು ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ತಾವು ಚುನಾವಣಾ ಸಂಸದರಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು, ಕೊಡಗನ್ನು ಸ್ವಿಜರ್ಲ್ಯಾಂಡ್ ರೀತಿ ಬೆಳೆಸಿ – ಎಷ್ಟು ಬೇಕಾದ್ರೂ ಹಣ ಕೊಡ್ತೀವಿ: ಬೊಮ್ಮಾಯಿ
Advertisement
2017 ರಲ್ಲಿ ಸಮ್ಮಿಶ್ರ ಸರ್ಕಾರದಿಂದ ಪ್ರಧಾನ ಮಂತ್ರಿಯಾದ ಅರ್ಡೆರ್ನ್ ಬಳಿಕ 3 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ತಮ್ಮ ಕೇಂದ್ರ-ಲೆಫ್ಟ್ ಲೇಬರ್ ಪಕ್ಷವನ್ನು ಗೆಲ್ಲಿಸಿದ್ದರು. ಇತ್ತೀಚಿನ ಸಮೀಕ್ಷೆಗಳಲ್ಲಿ ಅವರ ಪಕ್ಷ ಹಾಗೂ ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ.
Advertisement
52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನ್ಯೂಜಿಲೆಂಡ್ ಕೋವಿಡ್ ಬಂದಾಗ ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸಿತ್ತು. ಸಣ್ಣ ಜನ ಸಂಖ್ಯೆ ಹೊಂದಿದ ದೇಶವಾಗಿದ್ದರೂ ದೇಶವನ್ನು ಲಾಕ್‌ಡೌನ್ ಮಾಡಿದ್ದಕ್ಕೆ ಬಹಳ ಟೀಕೆಗೆ ಗುರಿಯಾಗಿತ್ತು. 1 ಪ್ರಕರಣ ದಾಖಲಾದ ಕೂಡಲೇ ದೇಶವನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ್ದಕ್ಕೆ ಜಸಿಂಡಾ ಅರ್ಡೆರ್ನ್ ವಿರುದ್ಧ ಕಟು ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k